ಎವಿಡೆನ್ಸ್ ಗೆ ಹಾಜರಾಗದಂತೆ ಗಂಡನಿಂದ ಹೆಂಡತಿಗೆ ಮನವಿ: ಹೆಂಡತಿ ಒಪ್ಪದ ಕಾರಣ ಕುತ್ತಿಗೆಗೆ ಚಾಕು ಇರಿತ: ಪೊಲೀಸ್ ಠಾಣೆಗೆ ಓಡಿ ಹೋಗಿ ಜೀವ ಉಳಿಸಿಕೊಂಡ ಹೆಂಡತಿ

ಗಂಡ ಹೆಂಡತಿ ಸಂಬಂಧ ಏಳೇಳು ಜನುಮದ ಅನುಬಂದ ಎನ್ನುತ್ತಾರೆ. ಆದರೆ ಇಲ್ಲೊಂದು ಜೋಡಿ ಇದಕ್ಕೆ ತದ್ವಿರುದ್ಧವಾಗಿದೆ. ಗಂಡನ ಕಾಟ ತಾಳಲಾರದೆ 11 ವರ್ಷ ದೂರವಿದ್ದ ಹೆಂಡತಿಗೆ ಈಗ ಗಂಡ ಮತ್ತೆ ಯಮಸ್ವರೂಪಿಯಾಗಿದ್ದಾನೆ. ಹಳೆಯ ಪ್ರಕರಣಕ್ಕೆ ಎವಿಡೆನ್ಸ್ ನೀಡಬೇಡ ಎಂದು ಹೆಂಡತಿ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ಓದಿ……….

ಹೌದು, ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿರುವ ಮಹಿಳೆ, ಮಹಿಳೆಯಿಂದ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ.

ಹಳೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯ ವಿರುದ್ಧ ಕೋರ್ಟ್‌ಗೆ ಎವಿಡೆನ್ಸ್‌ಗೆ ಹಾಜರಾಗದಂತೆ ಪತ್ನಿಗೆ ಬೇಡಿಕೊಂಡ್ರು ಒಪ್ಪದ ಪತ್ನಿ. ಈ ಹಿನ್ನೆಲೆ ಕೋಪಗೊಂಡ ಪತಿಯು ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ತಿವಿದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಚಿಕ್ಕಬಿದರಕಲ್ಲಿನ ರವಿಕಿರ್ಲೊಸ್ಕರ್ ಲೇಔಟ್ ನಿವಾಸಿ ಜಮುನಾ ಎಂಬಾಕೆಗೆ ಪತಿ ಗುರುಮೂರ್ತಿ ಚಾಕು ಇರಿದಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಇನ್ನೂ ಜಮುನಾ ಎಂಬಾಕೆ ಗುರುಮೂರ್ತಿಯ ಎರಡನೇ ಪತ್ನಿಯಾಗಿದ್ದು, ಕಳೆದ 10 ವರ್ಷಗಳಿಂದ ಪತಿಯನ್ನ ತೊರೆದು ಬೇರೆ ಇದ್ದು, ಈ ಸಂಬಂಧ ಪತಿ-ಪತ್ನಿ ನಡುವೆ ಕೋರ್ಟ್‌ನಲ್ಲಿ ದಾಂಪತ್ಯ ವಿವಾದ ನಡೆಯುತಿದೆ.

ಪತ್ನಿ ಜಮುನಾ ಈ ಹಿಂದೆಯೂ ಪತಿ ಗುರುಮೂರ್ತಿ ಮೇಲೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ಕೂಡ ದಾಖಲಿಸಿದ್ರು. ಈ ಸಂಬಂಧ 14 ರಂದು ಸಾಕ್ಷಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಬೇಕಿದ್ದ ಪತ್ನಿ ಜಮುನಾಗೆ ಸಾಕ್ಷಿ ಒದಗಿಸಬೇಡ ಎಂದು ಹಲವು ಬಾರಿ ಮನವಿ ಮಾಡಿದ್ದ. ಅದು ಅಲ್ಲದೆ ಬೆದರಿಕೆಯನ್ನು ಕೂಡ ಹಾಕಿದ್ದ ಎನ್ನಲಾಗಿದೆ.

ಒಂದು ವೇಳೆ ಸಾಕ್ಷಿ ಒದಗಿಸಿದ್ರೆ ಪತಿ ಗುರುಮೂರ್ತಿಗೆ ಶಿಕ್ಷೆ ಆಗುವ ಭಯದಿಂದ ಮತ್ತೊಮ್ಮೆ ಪತ್ನಿ ಜಮುನಾಳನ್ನು ಕೊಲ್ಲಲು ಯತ್ನಿಸಿದ್ದ ಎನ್ನಲಾಗಿದೆ.

ಗುರುಮೂರ್ತಿ ಈ ಹಿಂದೆ ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಕೂಡ ಆಗಿದ್ದ, ಅದು ಅಲ್ಲದೆ ಕುಡಿತಕ್ಕೆ ದಾಸನಾಗಿದ್ದ. ಸದ್ಯ ಘಟನೆ ಬಳಿಕ ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ಪತ್ನಿ ಜಮುನಾಳನ್ನು ದಾಖಲಿಸಿದ್ದು, ಪವಾಡ ಸದೃಶ ರೀತಿಯಲ್ಲಿ ಪತ್ನಿ ಜಮುನಾ ಪಾರಾಗಿದ್ದಾರೆ.

ಘಟನೆ ಬಳಿಕ ಗುರುಮೂರ್ತಿ ಪರಾರಿಯಾಗಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಒಟ್ಟಾರೆ ಕೂಡಿ ಬಾಳಬೇಕಿದ್ದ ಜೋಡಿ ಹೀಗೆ ಹಾದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದು ವಿಪರ್ಯಾಸ. ಹೀಗೆ ಹೆಂಡತಿ ಮೇಲೆ ಕೈ ಮಾಡುತ್ತಿರುವ ಆರೋಪಿಯನ್ನು ಪೊಲೀಸರು ಬಂಧಿಸಿ‌ ಕಾನೂನು ಕ್ರಮಕ್ಕೆ ಮುಂದಾಗುತ್ತಾ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!