
ದೊಡ್ಡಬಳ್ಳಾಪುರ : ವಿವಿಧತೆಯಲ್ಲಿ ಏಕತೆತನ್ನು ಸಾರುವ ಭಾರತ ದೇಶದ ವೈಶಿಷ್ಠತೆ, ದೇಶದ ವಿವಿಧ ರಾಜ್ಯಗಳ ವಿಭಿನ್ನ ಸಂಸ್ಕೃತಿ ಮತ್ತು ಆಚರಣೆಗಳನ್ನು ತಿಳಿಯುವ ಕಾರಣಕ್ಕೆ ದೊಡ್ಡಬಳ್ಳಾಪುರ ಕಾಂಗ್ರೆಸ್ ಮುಖಂಡರು ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮೇಘಾಲಯ ಪ್ರವಾಸದಲ್ಲಿದ್ದಾರೆ.
ದೊಡ್ಡಬಳ್ಳಾಪುರ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಜಿಲ್ಲಾ ವಕ್ತಾರರಾದ ಜಿ.ಲಕ್ಷ್ಮೀಪತಿ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ಆರ್.ವಿ.ಮಹೇಶ್ ಕುಮಾರ್, ಭೂ ಮಂಜೂರಾತಿ ಸದಸ್ಯರಾದ ಶ್ರೀಧರ್ ಗಂಗಸಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಂದೀಪ್ ಪಾಟೀಲ್, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಲಾವಣ್ಯ ನಾಗರಾಜ್ ಮತ್ತು ತಂಡದ ಸದಸ್ಯರು ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದಾರೆ.

ಅಸ್ಸಾಂ, ಮೇಘಾಲಯ ರಾಜ್ಯದಲ್ಲಿನ ವಿಶೇಷ ದೇವಾಲಯ ಮತ್ತು ಪ್ರವಾಸಿ ತಾಣಗಳಿಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದು, ಅಲ್ಲಿನ ಆಹಾರ ಪದ್ಧತಿ, ವೇಷ ಭೂಷಣ, ಕಲೆ, ಸಂಸ್ಕೃತಿಗಳನ್ನ ಅರಿಯುವ ಕಾರಣಕ್ಕೆ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವುದ್ದಾಗಿ ಹೇಳಿದ್ದಾರೆ.