ಮೆಡಿಕವರ್ ಆಸ್ಪತ್ರೆಯಲ್ಲಿ 5 ತಿಂಗಳಲ್ಲಿ 100ಕ್ಕೂ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆ – ತಾಂತ್ರಿಕತೆಗೆ ಹೊಸ ಮೈಲಿಗಲ್ಲು!

ಬೆಂಗಳೂರು, ವೈಟ್‌ಫೀಲ್ಡ್, : ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ಘಟಕವು ಕೇವಲ 5 ತಿಂಗಳಲ್ಲಿ 100ಕ್ಕೂ ಹೆಚ್ಚು ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿ, ತಂತ್ರಜ್ಞಾನ ಮತ್ತು ರೋಗಿ ಕೇಂದ್ರೀಕೃತ ಚಿಕಿತ್ಸೆಯ ಹೊಸ ಮಾನದಂಡ ಸ್ಥಾಪಿಸಿದೆ.

ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂತ್ರಶಾಸ್ತ್ರ, ಗೈನಿಕಾಲಜಿ ಮತ್ತು ಜೀರ್ಣಾಂಗ ಶಾಸ್ತ್ರ ಕ್ಷೇತ್ರಗಳಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಗಳಿಂದ ರೋಗಿಗಳ ಚೇತರಿಕೆಯ ಅವಧಿ, ನೋವು ಮತ್ತು ಆಸ್ಪತ್ರೆಯಲ್ಲಿ ಉಳಿಯುವ ಅವಧಿ ತುಂಬಾ ಕಡಿಮೆಯಾಗಿದೆ.

ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ನಾವು ಶಸ್ತ್ರಚಿಕಿತ್ಸೆಗಳನ್ನು ಸುರಕ್ಷಿತವಾಗಿ, ಸುಲಭವಾಗಿ ಮತ್ತು ಬೇಗನೆ ಮಾಡಿಸಲು ನಾವು ತಂತ್ರಜ್ಞಾನವನ್ನು ಬಳಸುತ್ತೇವೆ.ತಂತ್ರಜ್ಞಾನದಿಂದ ನಾವು ಕಡಿಮೆ ನೋವಿನಲ್ಲಿ, ಬೇಗ ಚೇತರಿಸಿಕೊಳ್ಳುವ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಬಹುದು ಎಂದು ತಿಳಿಸಿದರು.

ರೋಬೊಟಿಕ್‌ ಶಸ್ತ್ರಚಿಕಿತ್ಸೆಯಲ್ಲಿ ನಡೆದ ಪ್ರಮುಖ ವೈದ್ಯರುಗಳಾದ ಡಾ. ಪ್ರಮೋದ್ – ಮೂತ್ರಶಾಸ್ತ್ರಜ್ಞ, ಡಾ. ಜಾವೆದ್ ಹುಸೇನ್ – ಸಾಮಾನ್ಯ ಶಸ್ತ್ರಚಿಕಿತ್ಸೆ, ಡಾ. ಕೌಶಿಕ್ ಸುಬ್ರಮಣಿಯನ್ – ಜೀರ್ಣಾಂಗ ಶಾಸ್ತ್ರಜ್ಞ, ಡಾ. ಮಾನಸಾ ರೆಡ್ಡಿ, ಡಾ. ಸಬಿಹಾ , ಡಾ. ಸಂಸ್ಕೃತಿ ರೆಡ್ಡಿ – ಗೈನಿಕಾಲಜಿ , ಪ್ರಮೋದ್ ಯು – ಮಾರ್ಕೆಟಿಂಗ್ ಮುಖ್ಯಸ್ಥ , ಸಂಪೂರ್ಣ ಮಾರ್ಕೆಟಿಂಗ್ ತಂಡ ಮತ್ತು OT ಸಿಬ್ಬಂದಿಗಳು ಭಾಗಿಯಾಗಿದ್ದರು . ಕೇಕ್‌ ಕಟ್‌ ಮಾಡುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!