ವಿವಾಹದ ಕಟ್ಟುಪಾಡುಗಳು ಇತ್ತೀಚಿನವು- ನಮಗೆ ಜಾತಿ ಮೀರಿದ ಬದುಕು ಮುಖ್ಯವಾಗಬೇಕು- ಪ್ರಗತಿಪರ ಚಿಂತಕ ಮಂಜುನಾಥ ಅದ್ದೆ


ದೊಡ್ಡಬಳ್ಳಾಪುರ: ಪ್ರೀತಿಸುವವರು ದುಖಿಃಸುವಂತಾಗದೆ. ಬಾಳಿದಾಗಲೇ ಪಂಪ ಕವಿಯ ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವ ಮಾತು ಸಾರ್ಥಕವಾಗುತ್ತದೆ ಎಂದು ಪ್ರಗತಿಪರ ಚಿಂತಕ ಮಂಜುನಾಥ ಅದ್ದೆ ಹೇಳಿದರು.

ತಾಲ್ಲೂಕಿಗೆ ಸಮೀಪದ ಅದ್ದೆ ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ಸರಳವಾಗಿ ನಡೆದ ಅಂತರ ಜಾತಿ ವಿವಾಹದಲ್ಲಿ ಜೋಡಿಯಾದ ಶಿಲ್ಪ ಮತ್ತು ಸಂದೀಪ್ ಅವರನ್ನು ಆರ್ಶಿವದಿಸಿ ಮಾತನಾಡಿದರು.

ವಿವಾಹದ ಕಟ್ಟುಪಾಡುಗಳು ಇತ್ತೀಚಿನವು. ನಮಗೆ ಜಾತಿ ಮೀರಿದ ಬದುಕು ಮುಖ್ಯವಾಗಬೇಕು. ಪ್ರೀತಿ ಮತ್ತು ಪ್ರಕೃತಿಯಿಂದ ಮಾತ್ರವೇ ಇಂದಿನವರೆಗೂ ಮನುಷ್ಯ ಜೀನವ ಸಾಗಿ ಬಂದಿದೆ. ಲಂಪಟತನವನ್ನು ಮೀರಿ ಜೀವನ ನಡೆಸುವ ಕಡೆಗೆ ನಮ್ಮ ಗುರಿ ಸದಾ ಇರಬೇಕು.ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಎಲ್ಲರು ಹರಿಕಾರರಾಗಬೇಕಿದೆ. 12ನೇ ಶತಮಾನದಲ್ಲಿ ಬಸವಣ್ಣ ಪ್ರಾರಂಭಿಸಿರುವ ಸಾಮಾಜಿಕ ಬದಲಾವಣೆ ನಿರಂತರವಾಗಿ ನಡೆಯಬೇಕು. ಆಗ ಮಾತ್ರವೇ ಮನುಷ್ಯ ಕುಲ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.

ಪ್ರಾಧ್ಯಾಪಕ ಪ್ರಕಾಶ್ ಮಂಟೆದ ಅವರು ಶಿಲ್ಪ,ಸಂದೀಪ್ ದಂಪತಿಗಳಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯ ಬೋಧಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವಿಶ್ವನಾಥಬಾತಿ,ಆವಲಹಳ್ಳಿಶ್ರೀನಿವಾಸ್, ಗ್ರಾಮ ಪಂಚಾತಿಯಿ ಸದಸ್ಯ ಸಂತೋಷ್, ಸಾದೇನಹಳ್ಳಿ ಚಿಕ್ಕಣ್ಣ, ಹರೀಶ್, ಗೋವಿಂದರಾಜ್, ಚಂದ್ರಶೇಖರ್, ವಿಜಯಕುಮಾರ್ ಅದ್ದೆ, ಹನುಮಂತರಾಜು, ಕಾಕೋಳುಬಾಬು, ನವೀನ್ಸಾದೇನಹಳ್ಳಿ, ದೊಡ್ಡಬ್ಯಾಲಕೆರೆ ಮುನಿರಾಜು, ಮುತ್ತಗದಹಳ್ಳಿರವಿ, ಅರಕೆರೆ ಶ್ರೀನಿವಾಸ್, ಹನುಮಂತರಾಜು, ಲಿಂಗನಹಳ್ಳಿ ಬಸವರಾಜು, ಶ್ರೀರಾಮಪ್ಪತರಹುಣಸೆ, ಕೃಷ್ಣನಾಯಕ್, ಅಶೋಕ್ ಇದ್ದರು.

Leave a Reply

Your email address will not be published. Required fields are marked *

error: Content is protected !!