ಕ್ಷುಲ್ಲಕ ಕಾರಣಕ್ಕೆ ದಲಿತರ ಮೇಲೆ ಕಾರು ಹತ್ತಿಸಿದ ಸವರ್ಣೀಯ ವ್ಯಕ್ತಿ

ಯಲಹಂಕ : ದಲಿತನೋರ್ವ ಹೊಟೇಲ್ ನಲ್ಲಿ ನೀರು ಕುಡಿದದ್ದೇ ತಪ್ಪಾಗಿತ್ತು, ನೀನು ಕುಡಿದ ನೀರನ್ನು ನಾನು ಕುಡಿಯ ಬೇಕಾ ಎಂದು ಜಾತಿ ನಿಂದನೆ ಮಾಡಿದ ಸವರ್ಣಿಯ ವ್ಯಕ್ತಿ ಏಕಾಏಕಿ ಸ್ಥಳದಲ್ಲೇ ಹಲ್ಲೆ ಸಹ ನಡೆಸಿದ, ಇಷ್ಟಕ್ಕೆ ಸುಮ್ಮನಾಗದ ಆತ ದಲಿತ ಮತ್ತು ಆತನ ಸ್ನೇಹಿತರು ಬರುತ್ತಿದ್ದ ಸ್ಕೂಟರ್ ಮೇಲೆ ಕಾರು ಹತ್ತಿಸಿದ್ದಾನೆ, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ, ಮತ್ತೊಬ್ಬನ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.

ಯಲಹಂಕ ತಾಲೂಕಿನ ಕಾಕೋಳು ಗ್ರಾಮದಲ್ಲಿ ಮೇ.11ರ ಬೆಳಗ್ಗೆ 6:30 ಸಯಯದಲ್ಲಿ ಘಟನೆ ನಡೆದಿದ್ದು, ಒಂದೇ ಸ್ಕೂಟರ್ ನಲ್ಲಿ ಒಂದೇ ಊರಿನ ಮೂವರು ಕೆಲಸಕ್ಕೆ ಹೋಗುತ್ತಿದ್ದರು, ಅತಿವೇಗವಾಗಿ ಬಂದ ಕಾರು ಸ್ಕೂಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಲ್ಲಿದ್ದ ರಾಮಯ್ಯ ಮತ್ತು ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಸಹ ಚಿಂತಾಜನಕವಾಗಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರ ಸಾವಿಗೆ ಕಾರಣನಾದ ಭರತ್, ಯಲಹಂಕ ತಾಲೂಕಿನ ಹನಿಯೂರು ಗ್ರಾಮದವ, ಈತನ ಮೇಲೆ ರೌಡಿಶೀಟರ್ ಸಹ ಇದೆ, ಮೇಲ್ನೋಟಕ್ಕೆ ಅಪಘಾತವಾಗಿ ಕಂಡರು ಮೃತರು ಸಂಬಂಧಿಕರು ಕೊಲೆ ಆರೋಪವನ್ನ ಮಾಡುತ್ತಿದ್ದಾರೆ, ಹದಿನೈದು ದಿನಗಳ ಹಿಂದೆ ಮೃತ ರಾಮಯ್ಯ ರಾಜಯಕೀಯ ಪಕ್ಷವೊಂದರ ರ್ಯಾಲಿಗಾಗಿ ಹೆಸರಘಟ್ಟಕ್ಕೆ ಹೋಗಿದ್ದರು, ಈ ಸಮಯದಲ್ಲಿ ಅವರು ಹೊಟೇಲ್ ನಲ್ಲಿ ನೀರು ಕುಡಿದಿದ್ದಾರೆ, ಇದನ್ನ ಗಮನಿಸಿದ ಭರತ್, ನೀನು ಕುಡಿದ ನೀರನ್ನು ನಾವು ಕುಡಿಯ ಬೇಕಾ ಎಂದು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ, ನಿನ್ನನ್ನು ನೋಡಿಕೊಳ್ಳವುದ್ದಾಗಿ ಬೆದರಿಕೆ ಹಾಕಿದ್ದಾನೆ ಇದೇ ದ್ವೇಷದ ಮೇಲೆ ರಾಮಯ್ಯ ಎಂದಿನಂತೆ ಕೆಲಸಕ್ಕೆ ಬರುವುದು ಗೊತ್ತಿದ್ದ ಭರತ್, ಆತ ಬರುದನ್ನೇ ಕಾದು ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ ಎಂಬುದು ಮೃತ ಕುಟುಂಬದವರ ಆರೋಪ

ಘಟನೆಗೆ ಸಂಬಂಧಿಸಿದಂತೆ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಘಟನೆಗೆ ಕಾರಣನಾದ ಭರತ್ ಮತ್ತು ಆತನ ಸ್ನೇಹಿತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೃತ ರಾಯಯ್ಯನ ಸಂಬಂಧಿ ವೆಂಕಟೇಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *