ರಸ್ತೆ ಕಾಮಗಾರಿಗೆಂದು ತೋಡಲಾಗಿದ್ದ ಟ್ರಂಚ್‌ಗೆ ಸವಾರನ ನಿಯಂತ್ರಣ ತಪ್ಪಿದ ಬೈಕ್, ನೇರವಾಗಿ ಟ್ರಂಚ್‌ಗೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕಡ್ಡಿಪುಡಿ ಕಾರ್ಖಾನೆಯಿಂದ ಕೊನಘಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ ನಡೆದಿದೆ.
ಮೃತನನ್ನು ಮೆಳೇಕೋಟೆ ಸಮೀಪದ ಚೋಗೊಂಡಹಳ್ಳಿ ನಿವಾಸಿ ವರ್ಷದ ಶ್ರೇಯಸ್(22), ಎಂದು ತಿಳಿದುಬಂದಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.
ಹೂವಿನ ಕಡ್ಡಿ ತರಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಕೆಐಡಿಬಿ ಅವರು ಕೊನಘಟ್ಟದ ಹಳೇ ರಸ್ತೆಯಲ್ಲಿ ಟ್ರಂಚ್ ಹೊಡೆದಿದ್ದು, ಸ್ಥಳದಲ್ಲಿ ಯಾವುದೇ ಮುನ್ನೆಚ್ಚೆರಿಕಾ ಕ್ರಮಗಳನ್ನು ಅಳವಡಿಸಿಲ್ಲ. ಇದರ ಪರಿಣಾಮ ಒಂದು ಜೀವ ಹೋಗಿದೆ. ಇದಕ್ಕೆ ಕಾರಣ ಕೆಐಡಿಬಿಯವರ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಕರು ದೂರಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.