ದೇಶದ ಅತ್ಯುನ್ನತ ಬ್ರ್ಯಾಂಡ್‌ ಗಳಲ್ಲೊಂದಾದ ನಂದಿನಿ

ಅಪ್ಪಟ ಕನ್ನಡ ಬ್ರ್ಯಾಂಡ್‌ ನಂದಿನಿಯು $1,079 ಮಿಲಿಯನ್‌ (₹9,009.65 ಕೋಟಿ) ಮೌಲ್ಯದೊಂದಿಗೆ ‘ಬ್ರ್ಯಾಂಡ್‌ ಫೈನಾನ್ಸ್‌ 2025’ರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ನಂದಿನಿ ಭಾರತದ ಟಾಪ್‌ 100 ಅಮೂಲ್ಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ 43ನೇ ಸ್ಥಾನದಲ್ಲಿತ್ತು. ಬ್ರ್ಯಾಂಡ್‌ ಫೈನಾನ್ಸ್‌ ಲಂಡನ್‌ ಮೂಲದ ಅಂತರರಾಷ್ಟ್ರೀಯ ಸಲಹಾ ಸಂಸ್ಥೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಆಹಾರ ಮತ್ತು ಪಾನೀಯ ವಿಭಾಗದಲ್ಲಿ 4ನೇ ಸ್ಥಾನ ಪಡೆದಿರುವ ನಂದಿನಿಯು ಅಮುಲ್‌, ಬ್ರಿಟಾನಿಯಾ ಮತ್ತು ಮದರ್‌ ಡೈರಿಗಳಂತಹ ದೊಡ್ಡದೊಡ್ಡ ಬ್ರ್ಯಾಂಡ್‌ಗಳ ಜೊತೆಗೆ ಸ್ಪರ್ಧಿಸುತ್ತಿದೆ. ನಂದಿನಿಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಸರ್ಕಾರದ ಸಂಕಲ್ಪ, ರೈತರ ಶ್ರಮ ಮತ್ತು ಹೆಚ್ಚುತ್ತಿರುವ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತಿಬಿಂಬವಾಗಿದೆ ಎಂದು ತಿಳಿಸಿದರು.

ಪ್ರಮುಖಾಂಶಗಳು

ಬ್ರಾಂಡ್ ಫೈನಾನ್ಸ್ -2025 ಶ್ರೇಯಾಂಕದಲ್ಲಿ 43 ರಿಂದ 38ನೇ ಸ್ಥಾನಕ್ಕೆ ಜಿಗಿತ

ಕಳೆದೊಂದು ವರ್ಷದಲ್ಲಿ 139 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ವೃದ್ಧಿ

ದೇಶದ ಆಹಾರ ಮತ್ತು ಪಾನೀಯ ವಲಯದಲ್ಲಿ 4ನೇ ಸ್ಥಾನಕ್ಕೆ

ಒಟ್ಟು 1,079 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದ ಸಂಸ್ಥೆ

(ಮೂಲ: ಬ್ರಾಂಡ್ ಫೈನಾನ್ಸ್ ಇಂಡಿಯಾ 100-2025 ವರದಿ)

Leave a Reply

Your email address will not be published. Required fields are marked *