ಸಿಲಿಕಾನ್ ಸಿಟಿ ಬೆಂಗಳೂರು ಹೊರಭಾಗದಲ್ಲಿರುವ ಹೊಸಕೋಟೆ ತಾಲೂಕಿನಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಒಂದೇ ದಿನ 5 ಕಡೆ ಸರಗಳ್ಳತನ ನಡೆದಿದೆ.
ಹೊಸಕೋಟೆಯ 28ನೇ ವಾರ್ಡ್ ಕುವೆಂಪುನಗರದಲ್ಲಿ ಘಟನೆ ನಡೆದಿದೆ.
ದ್ವಿಚಕ್ರದಲ್ಲಿ ಬಂದು ಕಳ್ಳತನ, ಸರಗಳ್ಳತನ ಮಾಡಿ ಎಸ್ಕೇಪ್ ಆಗುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಂಗಡಿಯಲ್ಲಿ ವ್ಯಾಪಾರದ ನೆಪದಲ್ಲಿ ಬಂದು ಕಳ್ಳತನ ಮಾಡಲಾಗುತ್ತಿದೆ. ಕಳ್ಳರ ಹಾವಳಿಯಿಂದ ಜೀವ ಭಯದಲ್ಲಿ ಅಂಗಡಿ ಮಾಲೀಕರು ಜೀವನ ನಡೆಸುತ್ತಿದ್ದಾರೆ.
ಅಂಗಡಿಯಲ್ಲಿದ್ದ ಮಹಿಳೆಯ ಕೊರಳಲ್ಲಿ 40 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಮಹಿಳೆ ಚಿನ್ನದ ಸರ ಹಿಡಿದುಕೊಂಡ ಹಿನ್ನೆಲೆ ಅರ್ಧಕ್ಕೆ ಕಟ್ ಆಗಿದೆ. ಕೂಡಲೇ ಕಳ್ಳರನ್ನು ಬಂಧಿಸುವಂತೆ ಸಾರ್ವಜನಿಕರ ಒತ್ತಾಯ ಮಾಡುತ್ತಿದ್ದಾರೆ.
ಹೊಸಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.