ಬಿಜೆಪಿ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಜಿ.ಎನ್. ವೇಣುಗೋಪಾಲ್, ಆತನ ಮಗ ವಿವೇಕ್ ಎಂಬುವವರು ವಕೀಲ ಸಂದೀಪ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಕುರಿತು ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಕ್ಷಿದಾರರ ಜಮೀನಿನಲ್ಲಿ ಅತಿಕ್ರಮಣ ಮಾಡಿ, ವಿದ್ಯುತ್ ಕಂಬ ಹಾಕಿದ್ದರ ವಿಚಾರವಾಗಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಸಂಬಂಧ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಪರಿವೀಕ್ಷಣೆಗಾಗಿ ತೆರಳಿದ್ದ ವೇಳೆ ದಾಳಿ ನಡೆಸಲಾಗಿದೆ.
ಅವಾಚ್ಯ ಪದಗಳಿಂದ ನಿಂದನೆ, ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿದ್ದಾಗಿ 3-4 ಜನ ಸೇರಿ ವಕೀಲ ಸಂದೀಪ್ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ನಡೆಸಿದಲ್ಲದೇ ಕೋರ್ಟ್ ಆವರಣದಲ್ಲಿಯೇ ರೌಡಿಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.
ಪೊಲೀಸರು ಪರಿವೀಕ್ಷಣೆ ಮುಗಿಸಿ ಹೋದ ಕೇಲವೇ ಕ್ಷಣದಲ್ಲಿ ಎರಡು ಕಾರಿಗಳಲ್ಲಿ ಆಗಮಿಸಿದ ವೇಣುಗೋಪಾಲ್ ಹಾಗೂ ಆತನ ಮಗನಿಂದ ಸಂದೀಪ್ ಮೇಲೆ ಹಲ್ಲೆ ಮಾಡಲಾಗಿದೆ.
ಹಲ್ಲೆಗೊಳಗಾದ ವಕೀಲ ಸಂದೀಪ್ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಸಂಬಂಧ ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ದಾಖಲಿಸಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿ ವೇಣುಗೋಪಾಲ್ ಆತನ ಮಗ ವಿವೇಕ್ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅತಿಕ್ರಮ ಪ್ರವೇಶದ ದೂರು ಆಧಾರದಲ್ಲಿ ಪೊಲೀಸರ ಕರೆಯ ಮೇರೆಗೆ ಸ್ಥಳಕ್ಕೆ ಕಕ್ಷಿದಾರರೊಂದಿಗೆ ಸ್ಥಳ ಪರಿವೀಕ್ಷಣೆಗೆ ಭೇಟಿ ನೀಡಲಾಗಿತ್ತು. ಪರಿವೀಕ್ಷಣೆಗೆ ಬಂದಿದ್ದ ಹೋಯ್ಸಳ ಸಿಬ್ಬಂದಿ, ಅವರು ನಿರ್ಗಮಿಸುತ್ತಿದ್ದಂತೆ ವಕೀಲನ ಮೇಲೆ ದಾಳಿ ನಡೆಸಲಾಗಿದೆ ಎಂದು ಗಾಯಾಳು ಸಂದೀಪ್ ಆರೋಪಿಸಿದ್ದಾರೆ.