ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಸೇರಿದಂತೆ ಐದು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ವಿಷ ಪ್ರಾಶನದಿಂದ ಸಾವು ಸಂಭವಿಸಿದೆ ಎಂದು ತಿಳಿದುಬಂದಿದ್ದು,
ಸದ್ಯ ಅರಣ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದು, ವರದಿಗಾಗಿ ತನಿಖಾ ತಂಡವನ್ನು ರಚಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ನಾಲ್ಕು ಮರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿ.
ಹುಲಿ ಸಂರಕ್ಷಣೆಗೆ ಕರ್ನಾಟಕ ಹೆಸರುವಾಸಿಯಾಗಿದೆ. ಈ ಕಾರಣದಿಂದ ದೇಶದಲ್ಲೇ ಅತಿಹೆಚ್ಚು ಹುಲಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ಕೂಡಲೇ ಹುಲಿಗಳ ಅಸಹಜ ಸಾವಿನ ಕುರಿತು ತನಿಖೆ ನಡೆಸಬೇಕು ಮತ್ತು ಸಂರಕ್ಷಣೆಗೆ ಕ್ರಮ ವಹಿಸಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.
ಊರನ್ನೆಲ್ಲಾ ಕೊಳ್ಳೆ ಹೊಡೆದ ಮೇಲೆ ಊರು ಬಾಗಿಲು ಹಾಕಿದರಂತೆ ಹಾಗೆ ಈ ಸರಕಾರ ಎಲ್ಲಾ ಪ್ರಮಾದ ನೆಡೆದು ಹೋದ ಮೇಲೆ ತನಿಖೆ ಹುಡುಕಾಟ ಹುಲಿಗಳ ಸಾವಿಗೆ ನಿಜವಾದ ಕಾರಣವನ್ನು ಕಂಡು ಹಿಡೀತಾರಂತೆ ** ಖಂಡ್ರೆ ** ನೀನು ಯಾವ ಸೀಮೆ ಅರಣ್ಯ ಸಚಿವನೋ ಗೊತ್ತಾಗುತ್ತಿಲ್ಲ ಮಗನನ್ನ ಬೇರೆ ಸಂಸದನ ಮಾಡಿದೀಯ್ಯ ನೇರನು ಮಂತ್ರಿ ನಿಮ್ಮಿಬ್ಬರಿಂದಾಗುವ ಒಟ್ಟಾರೆ ತಿಂಗಳಿನ ಹಿರೇ ಎಷ್ಟು ಬೀಳುತ್ತದೆ ಕೇಂದ್ರ ಹಾಗು rajyakke( use less )