ದೇವನಹಳ್ಳಿಯಲ್ಲೊಬ್ಬ 50 ಶಾಸನಗಳ ಸಂರಕ್ಷಕ… 10 ಪುಸ್ತಕಗಳ ಸಂಪಾದಕ… 1 ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿರೊ ಪುಸ್ತಕಪ್ರೇಮಿ… ಯಾರು…. ಆ ವ್ಯಕ್ತಿ….? ಇಲ್ಲಿದೆ ಮಾಹಿತಿ ಓದಿ…..

ದೇವನಹಳ್ಳಿಯಲ್ಲೊಬ್ಬ 50 ಶಾಸನಗಳ ಸಂರಕ್ಷಕ… 10 ಪುಸ್ತಕಗಳ ಸಂಪಾದಕ… 1 ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿರೊ ಪುಸ್ತಕಪ್ರೇಮಿ… ಯಾರು…. ಆ ವ್ಯಕ್ತಿ….? ಇಲ್ಲಿದೆ ಮಾಹಿತಿ ಓದಿ…..

ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ ಹಲವು ಐತಿಹಾಸಿಕ ಸಾಧನೆಗಳ ಸಾಧಕರ ಕಣಜವಾಗಿದೆ. ಕೆಂಪೇಗೌಡರ ವಂಶಸ್ಥ ದ್ಯಾವಣ್ಣಗೌಡರ ಹೆಸರಿನಿಂದ ದೇವನಹಳ್ಳಿ ಎಂಬ ಹೆಸರು ಬಂದಿರೋದು ಇತಿಹಾಸವಿದೆ.. ಇಂತಹ ನೆಲದಲ್ಲಿ ದೇವನಹಳ್ಳಿ ಕೋಟೆಯಷ್ಟೇ ಗಟ್ಟಿಗರಾದ ಸಾಧಕರ ಸಾಲಿನಲ್ಲಿ ಬಿಟ್ಟಸಂದ್ರ ಗುರುಸಿದ್ದಯ್ಯ ಎಂಬ ಶಿಕ್ಷಕ ಬಹುಮುಖ ಪ್ರತಿಭೆ ಮೊದಲ ಸಾಲಲ್ಲಿ ನಿಲ್ತಾರೆ..

ದೇವನಹಳ್ಳಿ ಚಿಕ್ಕಬಳ್ಳಾಪುರ ರಸ್ತೆ ಆವತಿ ಬಳಿ ರಾಷ್ಟ್ರೀಯ ಹೆದಾರಿಗೆ ಹೊಂದಿಕೊಂಡಂತೆ ಗುಡಾರ, ಟೆಂಟ್‌ ಶಾಲೆಯ ಶಿಕ್ಷಕ ಗುರುಸಿದ್ದಯ್ಯ ಎಲ್ಲರಿಗೂ ಪರಿಚಿತ. ನೂರಾರು ಮಕ್ಕಳ ಜ್ಞಾನಾರ್ಜನೆಗೆ ಕಾರಣೀಭೂತರಾಗ್ತಾರೆ.. ಸರ್ಕಾರಿ ಶಾಲೆಗೆ ಮಕ್ಕಳು ಬರುವುದೇ ಕಷ್ಟ ಎಂಬ ಸಮಯದಲ್ಲಿ ಅನ್ನರಾಜ್ಯಗಳ ವಲಸೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಕರ್ನಾಟಕ ಸರ್ಕಾರ ಟೆಂಟ್‌ ಶಾಲೆ ಪ್ರಾರಂಭಿಸಿತ್ತು.. ಕಟ್ಟಡ ಕಾರ್ಮಿಕರು, ರಸ್ತೆ ನಿರ್ಮಾಣ ಕಾರ್ಮಿಕರು, ಇಟ್ಟಿಗೆ ಪ್ಯಾಕ್ಟರೀಗಳಲ್ಲಿ ಕೆಲಸ ಮಾಡುವ ಜನರ ಮಕ್ಕಳು ಟೆಂಟ್‌ ಶಾಲೆಗೆ ಬರ್ತಿದ್ದರು.. ಇಂತಹ ಕನ್ನಡ ಗೊತ್ತಿಲ್ಲದ ಮಕ್ಕಳಿಗೆ ಅಕ್ಷರ ಕಲಿಸಿ. ಆ ಮಕ್ಕಳು ಕಲಿತ ಹಾಡನ್ನು ಕೇಳಲು ಚೀಪ್‌ ಸೆಕ್ರೇಟರಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅಧಿಕಾರಿಗಳು ಟೆಂಟ್‌ ಶಾಲೆಗೆ ಬರ್ತಿದ್ದರು. ಇಂತಹ ಹಿನ್ನೆಲೆಯ ಗುರುಸಿದ್ದಯ್ಯ ಶಿಕ್ಷಕರಾಗಿ ಒಳ್ಳೆಯ ಮೇಷ್ಟ್ರು ಎಂದು ಹೆಸರಾದವರು.. ಶಾಲೆಯಿಂದ ನಿವೃತ್ತರಾಗಿ ವಿವಿಧ ಕ಼್ಷೇತ್ರಗಳಲ್ಲಿ ತೊಡಗಿಸಿಕೊಂಡು ದೇವನಹಳ್ಳಿ ಇತಿಹಾಸಕ್ಕೆ ಸಂಬಂಧಿಸಿ 10ಕ್ಕು ಹೆಚ್ಚು ಪುಸ್ತಕಗಳನ್ನು ಬರೆದು, ಬರೆಯಿಸಿ, ಸಂಪಾದಿಸಿ ಪ್ರಕಟಿಸಿರೊ ಬಹುಮುಖ ಪ್ರತಿಭೆ ಗುರುಸಿದ್ದಯ್ಯ..

ಗುರುಸಿದ್ದಯ್ಯ ಸಂಪಾದನೆಯ ಪುಸ್ತಕಗಳು….

1.ದೇವನಹಳ್ಳಿಯಿಂದ ದೇವನದೊಡ್ಡಿಯವರೆಗೆ-ಹಜ್ಜೆಗುರುತು..

2.ದೇವನಹಳ್ಳಿ ಕೋಟೆ- ಶ್ರೀ ವೇಣುಗೋಪಾಲಸ್ವಾಮಿ ದರ್ಶನ..

3.ರತ್ನಗರ್ಭ ವಸುಂಧರಾ-ದೇವನಹಳ್ಳಿಯ ಸಾಮಾಜಿಕ ಧಾರ್ಮಿಕ ಚಿತ್ರಣ.

4.ಹೂಗೊಂಚಲು-ಕಥಾಸಂಕಲನ..

5.ಸಾವಯವ ಕೃಷಿ ಋಷಿ-ಶಿವನಾಪುರ ರಮೇಶ್..

6.ದೇವನಹಳ್ಳಿ ತಾಲೂಕಿನ ಪ್ರವಾಸಿ ತಾಣಗಳು..

7.ಆವತಿನಾಡಪ್ರಭುಗಳು & ದೇವನಹಳ್ಳಿ ಪ್ರಾಂತ್ಯ..

8.ಅಭಯಆಂಜನೇಯಸ್ವಾಮಿ ಐಬಸಾಪುರ..

9.ದೇವನಹಳ್ಳಿ  ತಾಲೂಕಿನ ಅಪ್ರಕಟಿತ ಶಾಸನಗಳು..

10.ದೇವನಹಳ್ಳಿ ತಾಲ್ಲೂಕಿನ ನಲ್ಲೂರು ಕೋಟೆ..

11.ಆವತಿ ನಾಡಪ್ರಭುಗಳ ತಾಲ್ಲೂಕುವಾರು ಶಾಸನಗಳು..

ದೇವನಹಳ್ಳಿ ಆವತಿಯ ಗುಡಾರಶಾಲೆ 2006ರಲ್ಲಿ ಪ್ರಾರಂಭವಾಗಿ 2011ರವರೆಗೆ ಐದು ವರ್ಷಗಳು ಮಾತ್ರ ನಡೆಯಿತು.. ಶಾಲೆಯ ಏಕ ಶಿಕ್ಷಕರಾಗಿದ್ದ ಗುರುಸಿದ್ದಯ್ಯ ಪುಸ್ತಕಗಳ ಮೇಲೆ, ಸ್ಥಳೀಯ ದೇವನಹಳ್ಳಿ ಇತಿಹಾಸದ ಮೇಲೆ ಕಾಳಜಿಯನ್ನು ಬೆಳೆಸಿಕೊಂಡರು.. ಚಿಕ್ಕಬಳ್ಳಾಪುರದ ಪ್ರೊಪೇಸರ್‌ ಚಂದ್ರಶೇಖರ್‌ ಸ್ಮರಣಸಂಚಿಕೆಯಿಂದ ಸ್ಪೂರ್ತಿ ಪಡೆದು ಬಿಡಾರ, ಟೆಂಟ್‌ ಶಾಲೆಯ ಬಗ್ಗೆ  1)ಗುಡಾರಜ್ಯೋತಿ, 2) ಗುಳೇಹಕ್ಕಿ- ಗುಡಾರಚುಕ್ಕಿ ಎಂಬ ಎರಡು ಸ್ಮರಣಸಂಚಿಕೆ ಬಿಡುಗಡೆ ಮಾಡಿ ಶಾಲೆಯ ಮೇಲಿನ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸಿದ್ದರು..

ಗುರುಸಿದ್ದಯ್ಯರವರ ಸಾಹಿತ್ಯ-ಇತಿಹಾಸದ ಬಗೆಗಿನ ಅಭಿರುಚಿಗೆ ಮನೆಯ ಬೆಂಬಲವೂ ಹೆಚ್ಚಾಗಿದೆ.. ಮನೆಯ ಮೊದಲ ಹಂತಸ್ತು ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯವಾಗಿದೆ..

ಮನೆಗೆ ಭೇಟಿಕೊಟ್ಟರೆ ಯಾವುದೋ ಇತಿಹಾಸದ ಕೋಟೆ ಕೊತ್ತಲಕ್ಕೆ ಭೇಟಿಕೊಟ್ಟ ಅನುಭವ ಆಗ್ತದೆ.. ಗುರುಸಿದ್ದಯ್ಯರ ಸಾಹಿತ್ಯ ಮತ್ತು ಇತಿಹಾಸದ ಸೇವಗೆ ಶಿಕ್ಷಕರು ನೆರೆಹೊರೆ ಖುಷಿಯಾಗಿದ್ದಾರೆ..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಮಗ್ರ ಇತಿಹಾಸದ ಸ್ಪಷ್ಟ ಚಿತ್ರಣ ಗುರುಸಿದ್ದಯ್ಯ ಬಳಿ ಇದೆ.. ಯಾವ ದೇವಸ್ಥಾನ, ಎಲ್ಲಿದೆ.. ಯಾವ ಶಾಸನ ಏನನ್ನೇಳುತ್ತದೆ.. ಎಲ್ಲಿ ಇತಿಹಾಸದ ಪಳಿಯುಳಿಕೆ ಸಿಕ್ಕಿದೆ ಎಂಬುದರ ಪೂರ್ಣ ಮಾಹಿತಿ ಗುರುಸಿದ್ದಯ್ಯ ಬಳಿ ಸಿಗುತ್ತೆ..

ದೇವನಹಳ್ಳಿ ತಾಲೂಕು ಒಂದರಲ್ಲೆ 50ಕ್ಕು ಹೆಚ್ಚು ಅಪ್ರಕಟಿತ ಶಾಸನಗಳನ್ನು ಗುರುಸಿದ್ದಯ್ಯ ಒಬ್ಬರೆ ಪತ್ತೆಹಚ್ಚಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ..

ಹಿಂದಿನ ನಮ್ಮ ಪೂರ್ವಿಕರ ಘತವೈಭವವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವುದು ಎಲ್ಲರ ಕೈಯಲ್ಲಿ ಅಸಾದ್ಯ.. ಅಂತಹ ಮಹತ್ತರ ಕೆಲಸವನ್ನು ಗುರುಸಿದ್ದಯ್ಯ ದೇವನಹಳ್ಳಿಯಲ್ಲಿ ಒಬ್ಬರೆ ಕಲಾತಪಸ್ವಿ- ಶಾಸನ ಸಂರಕ್ಷಕನ ರೀತಿ ದುಡಿಯುತ್ತಿದ್ದಾರೆ..

ಬೆಂಗಳೂರು ಗ್ರಾ.ಜಿಲ್ಲೆ ಅದರಲ್ಲೂ ದೇವನಹಳ್ಳಿ ತಾಲ್ಲೂಕಿನ ಬಗ್ಗೆ ಡಾಕ್ಟರೇಟ್‌ ಮಾಡುವವರು, ಯಾವುದೇ ರೀತಿಯ ಮಾಹಿತಿ ಬೇಕೆನಿಸಿದವರು, ಸಂಶೋಧನಾ ವಿದ್ಯಾರ್ಥಿಗಳು, ಯಾರೆ ಬಂದರು ನಮ್ಮ ಗ್ರಂಥಾಲಯ, ಮನೆಲಿ ಓದಿ ತಿಳಿದುಕೊಳ್ಳಬಹುದು ಅಂತಾರೆ ಪುಸ್ತಕಪ್ರೇಮಿ ಗುರುಸಿದ್ದಯ್ಯ..

ಗುರುಸಿದ್ದಯ್ಯ ಬರಿ ಇತಿಹಾಸದ ಶಾಸನ ಸಂರಕ್ಕಕರಷ್ಟೆ ಅಲ್ಲ. ಪುಸ್ತಪ್ರೇಮಿಯ ಜೊತೆಗೆ ಇವರಲ್ಲಿ ಅತ್ತುತ್ತಮ ಕಲಾಪ್ರೇಮಿಯೂ ಇದ್ದಾರೆ.. ಸಾವಿರಾರು ಹಳೆಯ ನಾಣ್ಯ ಸಂಗ್ರಹ ಇವರ ಬಳಿ ಇದೆ.. ಪುರಾತನ ಕಾಲದ ವಿವಿಧ ಬಗೆಯ ರಾಗಿಬೀಸುವ ಕಲ್ಲಿನನಿಂದ ಹಿಡಿದು ಕಫಟೆ ಕೊತ್ತಲಗಳಲ್ಲಿ ಬಳಸುವ ಪಿರಂಗಿ ಕಲ್ಲಿನ ಗುಂಡುಗಳು ಸಹ ಇವೆ.. ಎತ್ತಿನಬಂಡಿ ಗಾಲಿ, ಚಕ್ರಗಳಿಂದ ಹಿಡಿದು, ದನಕರುಗಳು ನೀರು ಕುಡಿಯುವ ಸಾಧನ, ಒಳಕಲ್ಲು ಹೀಗೆ ಒಂದಲ್ಲ, ಹತ್ತಲ್ಲ, ನೂರಾರು ವಸ್ತುಗಳ ಸಂಗ್ರಹ ಇದೆ..

ಸದ್ಯ 60ರ ಇಳಿವಯಸ್ಸಿನಲ್ಲು ತಮ್ಮ ಟಿವಿಎಸ್‌ ಬೈಕ್ನಲ್ಲಿ ಓಡಾಡುತ್ತಾ ಶಾಸನಗಳನ್ನ, ಅತ್ಯಮುಲ್ಯ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಗುರುಸಿದ್ದಯ್ಯ ಬಿಜಿಯಾಗಿದ್ದಾರೆ..

ಮುಂದೆ ನಮ್ಮ ಮನೆಯೆಂಬ ಇತಿಹಾಸದ ಗ್ರಂಥಾಲಯವನ್ನ ದೊಡ್ಡ ಲೈಬ್ರಿಯನ್ನಾಗಿ ಮಾಡಬೇಕು.. ರಾಜ್ಯ ದೇಶದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನಮ್ಮನೆಯ ಪುಸ್ತಕ ಬಂಡಾರ ಬಳಕೆಯಾಗಬೇಕು ಎನ್ನುತ್ತಾರೆ..

Leave a Reply

Your email address will not be published. Required fields are marked *