ಮೆಡಿಕವರ್ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಬೆಂಗಳೂರು, ಜೂನ್ 21: ಬೆಂಗಳೂರಿನ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಯೋಗಗುರು ಡಾ. ನಾಗರಾಜ್‌ ಅವರ ಮಾರ್ಗದರ್ಶನದಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಸಿಬ್ಬಂದಿ ವರ್ಗ ಯೋಗ ಅಭ್ಯಾಸದಲ್ಲಿ ಭಾಗವಹಿಸಿದರು.

ಆಸ್ಪತ್ರೆಯ ಮುಖ್ಯಸ್ಥರಾದ ಕೃಷ್ಣಮೂರ್ತಿ ಅವರು ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ಹಾಗೂ ಎಲ್ಲಾ ವಿಭಾಗಗಳ ಸಿಬ್ಬಂದಿಯೊಂದಿಗೆ ಯೋಗದಲ್ಲಿ ಭಾಗವಹಿಸಿದರು.

ದೈನಂದಿನ ಜೀವನದಲ್ಲಿ ಯೋಗದ ಮಹತ್ವವನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೃಷ್ಣಮೂರ್ತಿ, “ಯೋಗ ಕೇವಲ ವ್ಯಾಯಾಮವಲ್ಲ; ಇದು ಮನಸ್ಸು, ದೇಹ ಹಾಗೂ ಆತ್ಮದ ಸಮನ್ವಯವಾಗಿರುವ ದಾರಿಯಾಗಿದೆ. ಮೆಡಿಕವರ್ ಆಸ್ಪತ್ರೆ ಸಮಗ್ರ ಆರೋಗ್ಯ ಸೇವೆಗೆ ಬದ್ಧವಾಗಿದೆ, ಈ ಕಾರ್ಯಕ್ರಮ ಅದನ್ನು ಪ್ರತಿಬಿಂಬಿಸುತ್ತದೆ” ಎಂದರು.

ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯು ಯೋಗದಲ್ಲಿ ಭಾಗವಹಿಸಿ, ಶಾಂತಿಯುತ ವಾತಾವರಣವನ್ನು ಸೃಷ್ಟಿಸಿದರು ಮತ್ತು ಸಮೂಹ ಮನೋಭಾವವನ್ನು ಮೆರೆದರು.

Leave a Reply

Your email address will not be published. Required fields are marked *