ಪ್ರತಿಭಟನೆ ಸ್ಥಳಕ್ಕೆ ಬಾರದ ತಹಶೀಲ್ದಾರ್ ವಿರುದ್ಧ ಆಕ್ರೋಶ

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮಂಗಳವಾರ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ನಾಗರೀಕ ಹೋರಾಟ ತಾಲೂಕು ಸಮಿತಿ ಮುಖಂಡರು ಪ್ರತಿಭಟನೆ ನಡೆಸುವಾಗ ಸ್ಥಳಕ್ಕೆ ಬಾರದ ತಹಶಿಲ್ದಾರ ಚೆನ್ನಮಲ್ಲಪ್ಪ ಘಂಟಿ ವಿರುದ್ಧ ಕ್ರಾಂತಿ ಮಂತ್ರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿರುವ ಟೋಲ್ ಗೇಟ್,ಅಂಬೇಡ್ಕರ್ ವೃತ್ತ ಕಾಮಗಾರಿ ನವೀಕರಣ,ಹಳೆ ಪ್ರವಾಸಿ ಮಂದಿರಕ್ಕೆ ಶಾಸಕರ ಹೆಸರು ನಾಮಫಲಕ ಹಾಕಿದ ಬೋರ್ಡ್,ವಿವಿಧ ಬೇಡಿಕೆಗಳ ಸೇರಿದಂತೆ,ಎಲ್ಲಾ ದಲಿತ ಪ್ರಗತಿಪರ ಸಂಘಟನೆಯ ಮುಖಂಡರು ಸೇರಿಕೊಂಡು ಹೋರಾಟ ಮಾಡಿದರು.

ಬೇಡಿಕೆಗಳನ್ನು ಸ್ಥಳೀಯ ಶಾಸಕಿಗೆ ಸಂಭಂದಿಸಿದ, ಹಲವಾರು ಸಮಸ್ಯೆಗಳು ಇರುವುದರಿಂದ ಶಾಸಕಿಯ ಅಣತಿಯಂತೆ ಕೆಲಸ ಮಾಡುವ ತಾಲೂಕಿಗೆ ದಂಡವಾದ ದಂಡಾಧಿಕಾರಿ ಮತ್ತು ಸಿಬ್ಬಂದಿಗಳು ಹೋರಾಟ ಸ್ಥಳಕ್ಕೆ ಆಗಮಿಸದೆ,ಪಲಾಯನ ಮಾಡಿ ಹೋರಾಟಗಾರರಿಗೆ ಅವಮಾನಿಸಿದ್ದಾರೆ ಎಂದರು.

ಅಧಿಕಾರಿಗಳು ಬರಲೇ ಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದು,ಅಂಬೇಡ್ಕರ್ ಕ್ರಾಂತಿ ಗೀತೆ ಆಡುವ ಮೂಲಕ ರಸ್ತೆ ಬಂದ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರತಿಭಟನೆ ಸ್ಥಳಕ್ಕೆ ದೌಡಾಸಿದ ಸಿಪಿಐ,ಪಿಎಸ್ಐ ಇನ್ನೂ ಕೆಲ ಅಧಿಕಾರಿಗಳು ಬಂದು ಸ್ವಾಂತನ ಹೇಳಿದ ಮೇಲೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಡಲಾಯಿತು.

ಈ ಸಂದರ್ಭದಲ್ಲಿ ಮನುಮಂತ ಮನ್ನಾಪುರಿ,‌ ಆದರ್ಶ ನಾಯಕ, ಹನುಮಂತ ಕಾಕರಗಲ್, ವಿಶ್ವನಾಥ ಬಲ್ಲಿದವ, ಭೀಮನಗೌಡ, ಕ್ರಾಂತಿಕುಮಾರ್, ಶಾಂತಕುಮಾರ ಹೊನ್ನುಟಗಿ, ವೆಂಕನಗೌಡ ವಕೀಲ್ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *