93 ವರ್ಷದ ವೃದ್ಧನೊಬ್ಬ ತನ್ನ ಪತ್ನಿಗೆ ಮಂಗಳಸೂತ್ರ ಕೊಡಿಸಲು ಚಿನ್ನದಂಗಡಿಗೆ ಚಿಲ್ಲರೆ ಕಾಸು ತಂದ ವಿಡಿಯೋ ಒಂದು ವೈರಲ್ ಆಗಿದೆ. ಇವರ ಕರುಣಾಜನಕ ಪ್ರೀತಿಗೆ ಮನಸೋತ ಅಂಗಡಿಯಾತ ಕೇವಲ 20 ರೂ. ಪಡೆದು ಮಂಗಳಸೂತ್ರ ಕೊಟ್ಟು ಕಳಿಸಿದ್ದಾನೆ.
ಅಂಗಡಿಯಾತನ ಹೃದಯ ವೈಶಾಲ್ಯತೆಗೆ ಕರಗಿಹೋದ ವೃದ್ಧ, ದಂಪತಿ ಕಣ್ಣೀರು ಹಾಕಿದ್ದಾರೆ. ನಮಗೆ ಇಬ್ಬರು ಗಂಡು ಮಕ್ಕಳಿದ್ದರು, ಅವರ ಪೈಕಿ ಒಬ್ಬ ಮೃತಪಟ್ಟಿದ್ದು , ಮತ್ತೊಬ್ಬ ಕುಡಿತದ ದಾಸನಾಗಿದ್ದಾನೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಸದ್ಯದ ಚಿನ್ನದ ಬೆಲೆಯ ಅರಿವಿಲ್ಲದೆ ಅಂಗಡಿ ಬಾಗಿಲು ಹತ್ತಿದ ಈ ದಂಪತಿ ತಮ್ಮ ಕೈಚೀಲದಿಂದ 1200 ರೂ. ತೆಗೆದಿದ್ದಾರೆ. ಇಷ್ಟು ಹಣ ಸಾಲದು ಎಂದು ಅಂಗಡಿಯಾತ ಹೇಳಿದಾಗ ವೃದ್ಧ ತನ್ನ ಜೇಬಿನಿಂದ ಚಿಲ್ಲರೆ ನಾಣ್ಯಗಳನ್ನು ಹೊರತೆಗೆದಿದ್ದಾನೆ. ಈ ದೃಶ್ಯ ಕಂಡು ಅಂಗಡಿಯಾತ ಕರಗಿ ನೀರಾಗಿದ್ದಾನೆ.
ಬಳಿಕ ಇಬ್ಬರ ಹಣವನ್ನೂ ಅವರಿಗೆ ವಾಪಸ್ ಕೊಟ್ಟು. ತಾಳಿಯನ್ನೂ ಕೊಟ್ಟು ನೀವು ಪಾಂಡುರಂಗ ರುಕ್ಮಿಣಿ ಇದ್ದಂತೆ.. ಕೇವಲ ಹತ್ತು ರೂಪಾಯಿ ಕೊಡಿ ಎಂದು ಹೇಳಿ ಆಶೀರ್ವಾದ ಪಡೆದು ಕಳಿಸಿದ್ದಾನೆ. ಅಂಗಡಿಯಾತನ ವರ್ತನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.