“ಬೆಟ್ಟ ಅಗೆದು ಇಲಿ ಹಿಡಿದರು” ಎಂಬ ಗಾದೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ. ನಂದಿ ಬೆಟ್ಟದಲ್ಲಿ ಸಂಪುಟ ಸಭೆ ಮಾಡುತ್ತೇವೆ ಎಂದು ಘೋಷಣೆ ಮಾಡಿ ಭರ್ಜರಿ ತಯಾರಿ ನಡೆಸಿದ್ದ ಕಾಂಗ್ರೆಸ್ ಸರ್ಕಾರ ನಿನ್ನೆ ಇದ್ದಕ್ಕಿದ್ದಂತೆ ಕೊನೆ ಕ್ಷಣದಲ್ಲಿ ನಂದಿ ಬೆಟ್ಟದಲ್ಲಿ ಇಂದು ನಡೆಯಬೇಕಿದ್ದ ಸಂಪುಟ ಸಭೆಯನ್ನು ರದ್ದು ಮಾಡಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದೆ.
ಇದಕ್ಕೆ ಕಾರಣ ಏನಪ್ಪಾ ಅಂದರೆ, ತನ್ನ ಅವೈಜ್ಞಾನಿಕ ನೀತಿಗಳು, ಮಿತಿಮೀರಿದ ಭ್ರಷ್ಟಾಚಾರ, ದುರಾಡಳಿತದಿಂದ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿ ದಿವಾಳಿ ಮಾಡಿರುವ ಕಾಂಗ್ರೆಸ್ ಸರ್ಕಾರದ ಬಳಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಘೋಷಣೆ ಮಾಡಲು ನಯಾ ಪೈಸೆ ಹಣವೂ ಇಲ್ಲ, ಬದ್ಧತೆಯೂ ಇಲ್ಲ, ಯಾವ ಹೊಸ ಆಲೋಚನೆಗಳೂ ಇಲ್ಲ.
ಹುರುಳಿಲ್ಲದ ಪ್ರಚಾರದಿಂದ, ಸತ್ವವಿಲ್ಲದ ಸಂಪುಟ ಸಭೆಗಳಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜನರ ಕಣ್ಣಿಗೆ ಮಂಕುಬೂದಿ ಎರಚಲು ಸಾಧ್ಯವಿಲ್ಲ ಎನ್ನುವ ಸತ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಡೆಗೂ ಜ್ಞಾನೋದಯ ಆದಂತಿದೆ.