ಇ-ಕ್ಷಣ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಏಪ್ರಿಲ್ 2023ರ ಮಾಹೆಯಲ್ಲಿ ಶೇ. 24 ರಷ್ಟು ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕರಾದ ಗಂಗೂಬಾಯಿ ರಮೇಶ್ ಮಾನಕರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಅಭಿನಂದನಾ ಪತ್ರದ ಮೂಲಕ ಶ್ಲಾಘಿಸಿದ್ದಾರೆ.