ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ವಿವಿಧ ತಂಡಗಳಿಂದ ಇದುವರೆಗೂ ವಶಪಡಿಸಿಕೊಂಡ ವಸ್ತುಗಳ ಒಟ್ಟಾರೆ ಮೌಲ್ಯ 4,66,28,349 ರೂ.ಗಳು.
ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ ಮಾರ್ಚ್.29ರಿಂದ ಮೇ.9ರವರೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ವಶಪಡಿಸಿಕೊಂಡಿರುವ ನಗದು, ಇತರೆ ವಸ್ತುಗಳ ವಿವರ ಇಲ್ಲಿದೆ
•ನಗದು: ಮೌಲ್ಯ ರೂ. 87,53,060
•ಮದ್ಯ: ಮೌಲ್ಯ ರೂ. 2,82,40,047 (97124.760 ಲೀ.)
•ಮಾದಕ ವಸ್ತು: ಮೌಲ್ಯ ರೂ. 19,68,700 (30.899 ಕೆ.ಜಿ.)
•ಇತರೆ ವಸ್ತು: ಮೌಲ್ಯ ರೂ. 76,66,542 (17058 ವಸ್ತು)
•ಒಟ್ಟು ರೂ. 4,66,28,349.