ಗಿಡ ನೆಡುವ ಮೂಲಕ ಕೆ.ಎಸ್.ಇ.ಎಫ್ ಮಹಾವಿದ್ಯಾಲಯದಲ್ಲಿ ಪರಿಸರ ದಿನಾಚರಣೆ ಆಚರಣೆ 

ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲೆ ಮಾನವರು ತನ್ನ ಸ್ವಾರ್ಥ ಸಾಧನೆಗಾಗಿ ಮರ ಗಿಡಗಳನ್ನು ಕಡಿಯುವುದರಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಆದಕಾರಣ ಗಿಡ ಮರಗಳನ್ನು ನೆಡುವುದರ ಮುಖೇನ ಪರಿಸರವನ್ನು ಸಂರಕ್ಷಿಸಬೇಕೆಂದು ಕಾರ್ಯಕ್ರಮದ ಗೌರವ ಅತಿಥಿ ಪರಮೇಶ್ ಜಿ. ಸಂದೇಶ ನೀಡಿದರು.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ಕಲ್ಪವೃಕ್ಷ ಯುವ ನಗರ ಮತ್ತು ಗ್ರಾಮೀಣಅಭಿವೃದ್ಧಿ ಸಂಸ್ಥೆ (ರಿ) ತುಮಕೂರು, ಆದಿ ಸಂಜೀವಿನಿ ಯುವ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ತುಮಕೂರು, ಮಾತೃಭೂಮಿ ಸಮಗ್ರ ಸಮಾಜಾಭಿವೃಧ್ಧಿ ಸಂಸ್ಥೆ (ರಿ) ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕೆ. ಎಸ್.ಇ.ಎಫ್ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪಿ. ರಾಮಕೃಷ್ಣ ವಹಿಸಿದ್ದರು. ಈ ಸಂಧರ್ಭದಲ್ಲಿ ರಮೇಶ್.ಟಿ, ಸಿದ್ದೇಶ್.ಕೆ ಹಾಗೂ ಈ ಕಾಲೇಜಿನ ಉಪನ್ಯಾಸಕರಾದ ಡಾ. ಹರೀಶ್, ಡಾ.ಅರುಣ, ಡಾ. ಕುಮಾರ ಸ್ವಾಮಿ, ರತ್ನಪ್ರಭಾ. ಭೋದಕೇತರ ಸಿಬ್ಬಂದಿ ವರ್ಗದವರಾದ ಸ್ವಾಮಿ, ರಾಜಶೇಖರ್ ಉಪಸ್ಥಿತರಿದ್ದರು.

ವಂದನಾ ಕಾರ್ಯಕ್ರಮ ನಿರೂಪಿಸಿದರು. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಭೀರಲಿಂಗ, ರೇಖಾ, ನಳಿನ, ಭೂಮಿಕ, ಕಾವ್ಯ ಯಶಸ್ವಿನಿ ವಿಧ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ವಿತರಿಸಲಾಯಿತು.  ಆನಂತರ ಕಾಲೇಜಿನ ಸುತ್ತಮುತ್ತಲು ವಿವಿಧ ರೀತಿಯ ಸಸ್ಯಗಳನ್ನು ವಿದ್ಯಾರ್ಥಿಗಳೊಂದಿಗೆ ನೆಡಲಾಯಿತು.

Leave a Reply

Your email address will not be published. Required fields are marked *

error: Content is protected !!