#IPL:18ನೇ ಆವೃತ್ತಿಯ ಐಪಿಎಲ್‌ ಫೈನಲ್‌: ಆರ್ ಸಿಬಿಗೆ ಸಪೋರ್ಟ್ ಮಾಡುವಂತೆ ಡಂಗೂರ ಸಾರಿದ ಆರ್ ಸಿಬಿ ಫ್ಯಾನ್ಸ್

ಸುಮಾರು 60 ದಿನಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇಂದು ತೆರೆ ಬೀಳಲಿದೆ.

18ನೇ ಆವೃತ್ತಿಯ ಐಪಿಎಲ್‌ ಫೈನಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ.

ಉಭಯ ತಂಡಗಳು ಸತತ 17 ವರ್ಷ ಕಠಿಣ ತಪ್ಪಸ್ಸನ್ನೇ ಮಾಡಿದ್ದು, ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿವೆ. ಇಬ್ಬರಲ್ಲಿ ಒಬ್ಬರ 17 ವರ್ಷಗಳ ವನವಾಸಕ್ಕೆ ಇಂದು ತೆರೆ ಬೀಳಲಿದೆ.

ಟ್ರೋಫಿಯ ಮೇಲೆ ಯಾವ ತಂಡದ ಹೆಸರು ಮುದ್ರಣವಾಗಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

ಇದೆಲ್ಲದರ ನಡುವೆ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಆರ್ ಸಿ ಬಿ ಫ್ಯಾನ್ಸ್ ವಿನೂತನವಾಗಿ ಆರ್ ಸಿ ಬಿ ಟೀಮ್ ಗೆ ಸಪೋರ್ಟ್ ಮಾಡಿ ಎಂದು ಡಂಗೂರ ಸಾರುವ ಮೂಲಕ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ಗ್ರಾಮದ ಪ್ರಮುಖ ಬೀದಿ ಬೀದಿಗಳಲ್ಲಿ ತಮಟೆ ಹೊಡೆದು ಆರ್ ಸಿ ಬಿ ಟೀಮ್ ಗೆ ಸಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.

ಸಂಜೆ ನಡೆಯಲಿರುವ ಪಂದ್ಯ ವೀಕ್ಷಣೆಗೆ ಗ್ರಾಮದಲ್ಲಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ‌ ಕೂಡ ಮಾಡಲಾಗಿದೆ.

ಸದ್ಯ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಗ್ರಾಮದ ಜನರು  ಕಾತುರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *