ಮಾಟ-ಮಂತ್ರ: ಬೆಚ್ಚಿಬಿದ್ದ ಬೈರಾಪುರ ತಾಂಡ: ವಾಮಾಚಾರದಿಂದ ಗ್ರಾಮದಲ್ಲಿ ಮನೆ ಮಾಡಿದ ಆತಂಕ

ಅದೆಷ್ಟೇ ಆಧುನಿಕತೆ ಮುಂದುವರೆದರೂ, ಜನ ಅದೆಷ್ಟೇ ಉನ್ನತ ವಿದ್ಯಾಭ್ಯಾಸ ಮಾಡಿದರೂ, ಅದೆಷ್ಟೇ ವಿದ್ಯೆ ಬುದ್ದಿ ಇದ್ದರೂ….. ಮೂಢನಂಬಿಕೆ, ಮಾಟ-ಮಂತ್ರದಂತಹ ಘಟನೆಗಳು ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ತಾಂಡದಲ್ಲಿ ನಡೆದ ಮಾಟ- ಮಂತ್ರವೇ ಸಾಕ್ಷಿ ಎನ್ನಬಹುದು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಮುನಿಶಾಮ ನಾಯ್ಕ್ ಎಂಬವರ ಮನೆ ಮುಂದೆ ವಾಮಾಚಾರ ಮಾಡಿರುವುದು ಕಂಡುಬಂದಿದೆ.

ಮನೆಯವರು ಬೆಳಗ್ಗೆದ್ದು ನೋಡಿದಾಗ ಮನೆ ಮುಂದೆ ಅಕ್ಕಿಕಾಳು, ನಿಂಬೆಹಣ್ಣು, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ. ಇದನ್ನು ಕಂಡು ಮನೆಯವರು ಮತ್ತು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಈ ಕುರಿತು ಪಬ್ಲಿಕ್ ಮಿರ್ಚಿ ಜೊತೆ ಮುನಿಶಾಮ ನಾಯ್ಕ್ ಪುತ್ರ ಮಂಜುನಾಥ್  ಮಾತನಾಡಿ, ಬೈರಾಪುರ ತಾಂಡದಲ್ಲಿ ವಯಸ್ಸಾದ ನಮ್ಮ ಅಪ್ಪ-ಅಮ್ಮ ಇಬ್ಬರೇ ವಾಸವಾಗಿದ್ದಾರೆ. ಯಾರೋ ದುಷ್ಕರ್ಮಿಗಳು ನಮ್ಮನ್ನು ವೈಯಕ್ತಿವಾಗಿ ಗುರಿಯಾಗಿಸಿಕೊಂಡು ನಮ್ಮ ಮನೆ ಬಳಿ ನಿಂಬೆಹಣ್ಣು, ತಾಯತ, ಅರಿಶಿಣ, ಕುಂಕುಮ, ಹೂ, ಮೂಳೆ, ರಕ್ತವನ್ನು ಚೆಲ್ಲಿ ಮಾಟ ಮಂತ್ರ ಮಾಡಿ ಮಾನಸಿಕವಾಗಿ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ಗ್ರಾಮದಲ್ಲಿ ನಡೆಯುತ್ತಿದ್ದ ಕೆಲವೊಂದು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿಎತ್ತಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಿದ್ದೆ. ಅಂದಿನಿಂದ ಈ ರೀತಿಯಾದಂತಹ ಕೃತ್ಯಗಳು ನಮಗೆ ಕಂಡುಬರುತ್ತಿವೆ. ನಾವು ಯಾರಿಗೂ ಯಾವುದೇ ರೀತಿಯ ಮೋಸ, ಅನ್ಯಾಯ ಮಾಡಿಲ್ಲ. ನಮ್ಮ ಪೋಷಕರಿಗೆ ವಯಸ್ಸಾಗಿದೆ. ಇಬ್ಬರೇ ಊರಲ್ಲಿ ವಾಸವಾಗಿದ್ದಾರೆ. ನಾವು ನಗರದಲ್ಲಿ‌ ಇದ್ದೇವೆ. ಅವರು ಬೆಳಗ್ಗೆ ಎದ್ದು ಬಾಗಿಲು‌ ತೆರೆದು ನೋಡಿದರೆ‌ ಮನೆ ಮುಂದೆ‌ ಎಲ್ಲೆಂದರಲ್ಲಿ ನಿಂಬೆ ಹಣ್ಣು ತಾಯತ, ಅರಿಶಿಣ, ಕುಂಕುಮ, ಹೂ, ಮೂಳೆ‌ ಸೇರಿದಂತೆ‌ ಇತರೆ ವಸ್ತುಗಳು ಕಾಣಸಿಗುತ್ತವೆ. ಇವುಗಳನ್ನು ನೋಡಿ ನಮ್ಮ ಅಪ್ಪ ಅಮ್ಮ ಭಯಭೀತರಾಗಿದ್ದಾರೆ. ಮಾನಸಿಕವಾಗಿ ನೊಂದಿದ್ದಾರೆ ಎಂದು ತಿಳಿಸಿದರು.

ನಮ್ಮ ಮನೆ‌ ಮುಂದೆ‌ ಜೊತೆಗೆ‌ ಊರಿನ ಕೆಲ ಮನೆಗಳ ಮುಂದೆಯೂ‌ ಸಹ‌‌ ಇದೇ ರೀತಿ‌‌ ಮಾವಾಚಾರ ಕೃತ್ಯಗಳು ಕಂಡುಬರುತ್ತಿವೆ. ಇದರಿಂದ‌ ಗ್ರಾಮಸ್ಥರಲ್ಲಿ ಆತಂಕ‌ ಮನೆ ಮಾಡಿದೆ. ಗ್ರಾಮದಲ್ಲಿ ಜನರು ಬಹಳ ಅನ್ಯೋನ್ಯವಾಗಿದ್ದರು. ಇದೀಗ ಈ ಘಟನೆಗಳಿಂದ ಯಾರನ್ನು ನಂಬದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ನಮ್ಮ ಮನೆ ಮುಂದೆ ವಾಮಾಚಾರ ಇದೇ ಮೊದಲಲ್ಲ. ಮೊದಲಿಗೆ ಇದೀರೀತಿ ಮಾಟ ಮಂತ್ರ ನಡೆದಿತ್ತು. ಇದರಿಂದ ನನ್ನ ಪುಟ್ಟ‌ಕಂದಮ್ಮನನ್ನು ಕಳೆದುಕೊಂಡೆ. ಮಗನನ್ನು ಕಳೆದುಕೊಂಡ ದುಖದಲ್ಲಿದ್ದೇನೆ. ಪದೇ ಪದೇ ಮಾಟ‌ಮಂತ್ರ ನಡೆಯುತ್ತಲೇ ಇದೆ. ಏನಾದರು ದ್ವೇಷ, ಮಮಸ್ಥಾಪವಿದ್ದರೆ‌‌ ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕು ಅದನ್ನು ಬಿಟ್ಟು ಪರೋಕ್ಷವಾಗಿ ಈ ರೀತಿ ಮಾಡುವುದು ಎಷ್ಟರ‌ ಮಟ್ಟಿಗೆ ಸರಿ.

ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಆದಷ್ಟು ಬೇಗ ವಾಮಾಚಾರಿಗಳನ್ನು ಪತ್ತೆಹಚ್ಚಿ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದರು….

Leave a Reply

Your email address will not be published. Required fields are marked *