ಚಿಕ್ಕಬಳ್ಳಾಪುರ: ಹುಚ್ಚು ಶೋಕಿಯಲ್ಲಿ ದುವರ್ತನೆ ತೋರುವಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇದರ ನಡುವೆ ಲಾಂಗ್ ಹಿಡಿದು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದ ಆಟೋ ಚಾಲಕನಿಗೆ ಪೊಲೀಸರು ಪಾಠ ಕಲಿಸಿದ್ದಾರೆ.
ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ವೈಚಕೂರಿನಲ್ಲಿ ಘಟನೆ ನಡೆದಿದೆ…
ಆಟೋ ಚಾಲಕ ಅನಿಲ್ ಕುಮಾರ್ ಬಿಲ್ಡಪ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈತನಿಗೆ ಪಾಠ ಕಲಿಸಿದ್ದಾರೆ.
ಮುಚ್ಚಳಿಕೆ ಬರೆದುಕೊಟ್ಟ ಆರೋಪಿ ಠಾಣೆಗೆ ಕರೆದುಕೊಂಡ ಬಂದ ಪೊಲೀಸರು ಈತನಿಗೆ ಪಾಠ ಮಾಡಿದ್ದಾರೆ. ಲಾಂಗ್ ಹಿಡಿದು ಕೇಕ್ ಕತ್ತರಿಸುವ ಅವಶ್ಯಕತೆ ಏನ್ ಇತ್ತು? ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಆರೋಪಿ ಮುಚ್ಚಳಿಕೆ ಬರೆದುಕೊಟ್ಟು ಇನ್ನೇಂದು ಹೀಗೆ ವರ್ತಿಸುವುದಿಲ್ಲ ಎಂದು ಹೇಳಿದ್ದಾನೆ.