ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಸ್ ಘಾಟಿ ಸುಬ್ರಹ್ಮಣ್ಯ ದೇವಾಲಯದ ಸಮೀಪವಿರುವ ಬಂಡೇಪಾಳ್ಯದಲ್ಲಿರುವ 31ಅಡಿ ಎತ್ತರವಿರುವ ದೇವರಬೆಟ್ಟ ಶ್ರೀ ವಿಶ್ವ ಶನೇಶ್ವರ ಸ್ವಾಮಿಯ 21ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಹಗಲು ಪರಿಷೆ ಕಾರ್ಯಕ್ರಮಗಳು ಭಕ್ತರ ಸಮ್ಮಖದಲ್ಲಿ ಬಹಳ ಸಂಭ್ರಮ ಸಡಗರದಿಂದ ನೆರವೇರಿದವು.
ಶನೇಶ್ವರ ಸ್ವಾಮಿ, ಬನಶಂಕರಿ, ಪಂಚಮುಖಿ ಗಣಪತಿ, ಆಂಜನೇಯಸ್ವಾಮಿ, ಆದಿತ್ಯಾದಿ ನವಗ್ರಹಗಳಿಗೆ ಮೇ.26ರಿಂದ ಜೂ.1ರವರೆಗೆ ವಿವಿಧ ಪೂಜಾವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಹಗಲು ಪರಿಷೆ ಹಿನ್ನೆಲೆ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದುಬಂದು ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಹಗಲು ಪರಿಷೆಯನ್ನು ಕಣ್ತುಂಬಿಕೊಂಡು ದೇವರ ಕೃಪೆಗೆ ಪಾತ್ರರಾದರು.