ಮೇಕೆ ಮೇಯಿಸುತ್ತಿದ್ದ ರೈತನ ಮೇಲೆ ಕರಡಿ ದಾಳಿ‌ ಕೇಸ್: ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ, ಪರಿಶೀಲನೆ

ಮೇಕೆ ಮೇಯಿಸುತ್ತಿದ್ದ ರೈತನ ಮೇಲೆ ಎರಗಿದ ಕರಡಿ, ಮನಸೋಇಚ್ಛೆ ರೈತನ ಮೈಯಲ್ಲಾ ಪರಚಿ ಗಾಯಪಡಿಸಿರುವ ಘಟನೆ ತಾಲೂಕಿನ ಹೊಸಹಳ್ಳಿ ಸಮೀಪದ ಕುಕ್ಕಲಹಳ್ಳಿ ಬಳಿ ಇಂದು ಮಧ್ಯಾಹ್ನ ಸುಮಾರು 3:50ರಲ್ಲಿ ನಡೆದಿತ್ತು….

ಕುಕ್ಕಲಹಳ್ಳಿ ಗ್ರಾಮದ ಲಕ್ಷ್ಮಿನರಸಪ್ಪ (58) ಕರಡಿ ದಾಳಿಯಿಂದ ಗಾಯಗೊಂಡ ರೈತ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಹಿನ್ನೆಲೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ವಿವರ…

ಕುಕ್ಕಲಹಳ್ಳಿ ಗ್ರಾಮದ ಹೊರವಲಯದಲ್ಲಿ ಎಂದಿನಂತೆ ಮೇಕೆ ಮೇಯಿಸಲು ರೈತ ಲಕ್ಷ್ಮಿನರಸಪ್ಪ ಹೋಗಿದ್ದಾರೆ. ಸುಮಾರು 3:50ರ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕರಡಿ ಏಕಾಏಕಿ ರೈತನ ಮೇಲೆ ದಾಳಿ ನಡೆಸಿದೆ….

ಘಟನಾ ಸ್ಥಳದಲ್ಲಿ ಮೂರ್ನಾಲ್ಕು ಹಲಸಿನ ಮರಗಳಿದ್ದು, ಕರಡಿ ಹಲಸಿನ‌‌ ಹಣ್ಣು ತಿನ್ನಲು ಹಲಸಿನ ಮರ ಹತ್ತಿದ್ದು, ರೈತನ ಶಬ್ಧ‌ ಕೇಳುತ್ತಿದ್ದಂತೆ ಮರದಿಂದ ಇಳಿದು ರೈತನ ಮೇಲೆ ಎರಗಿ ಮೈಯಲ್ಲಾ ಪರಚಿ ಗಾಯಪಡಿಸಿದೆ…

ಕರಡಿ ದಾಳಿಯಿಂದ ಗಾಯಗೊಂಡ ಲಕ್ಷ್ಮಿನರಸಪ್ಪನವರು ಕೂಡಲೇ ಹೊಸಹಳ್ಳಿ ಪ್ರಾಥಮಿಕ‌ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದಾರೆ…

ಹೊಸಹಳ್ಳಿ ವ್ಯಾಪ್ತಿಯ ಸುತ್ತಮುತ್ತಾ ಗ್ರಾಮಗಳಲ್ಲಿ ಚಿರತೆ, ಕರಡಿಗಳ ಕಾಟ ಹೆಚ್ಚಾಗಿದೆ.. ಕೂಡಲೇ ಇವುಗಳನ್ನು ಸೆರೆ ಹಿಡಿದು ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯಲ್ಲಿ ಮನವಿ‌ ಮಾಡಿದ್ದಾರೆ.

ಗ್ರಾಮಸ್ಥರ ಮನವಿ‌ ಹಿನ್ನೆಲೆ ಕರಡಿ, ಚಿರತೆ ಸೆರೆ ಹಿಡಿಯಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ….

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…

Leave a Reply

Your email address will not be published. Required fields are marked *