ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಬಿ.ಮುನೇಗೌಡ, ನನ್ನ ಹಿತ ಶತ್ರುಗಳು, ಒಳ ಶತ್ರುಗಳು, ಹಿಂದೆ-ಮುಂದೆ ಮಾತಾಡುವ ಶತ್ರುಗಳು ಸೇರಿದಂತೆ ಇತರರು ನನ್ನನ್ನು ಸೋಲಿಸಲು ಎಷ್ಟೇ ಕುತಂತ್ರ, ಷಡ್ಯಂತ್ರ ಮಾಡಿದ್ರೂ ಸಹ ಪ್ರಮಾಣಿಕತೆ, ಸತ್ಯ ಗೆದ್ದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಬಮೂಲ್ ಚುನಾವಣೆ ಗೆದ್ದ ಬಳಿಕ ಮೊದಲ ಬಾರಿಗೆ ಬಿ.ಸಿ ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಗೆಲುವು ಸಾಧಿಸುವುದಕ್ಕೆ ಶಾಸಕ ಧೀರಜ್ ಮುನಿರಾಜ್ ಸಾರಥ್ಯ ವಹಿಸಿದ್ದರು. ಈ ಚುನಾವಣೆ ಸಾವು-ಬದುಕಿನ ನಡುವೆ ನಡೆದಂತಹ ಚುನಾವಣೆ, ನನಗೆ ಹಿತ ಶತ್ರುಗಳ ಕಾಟ ಹೆಚ್ಚಾಗಿತ್ತು. ನನ್ನ ಈ ಗೆಲುವಿಗೆ ಕಾರಣರಾದ ಡೈರಿ ಅಧ್ಯಕ್ಷರುಗಳು, ಹಾಲು ಉತ್ಪಾದಕರಿಗೆ, ಕಾರ್ಯದರ್ಶಿಗಳಿಗೆ ಸ್ನೇಹಿತರಿಗೆ ಧನ್ಯವಾದಗಳು, ನಾನು ಕಾಯಾ,ವಾಚಾ, ಮನಸಾ ಕೆಲಸ ಮಾಡಿ ರೈತರಪರ ನಿಂತು ರೈತನ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದರು.
ಒಟ್ಟು 201 ಮತಗಳಲ್ಲಿ 156ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಹಸ್ಕೂರ್ ಟಿ.ಆನಂದ್ ಅವರು ಕೇವಲ 40 ಮತಗಳನ್ನು ಪಡೆದು ಪರಾಭಾವಗೊಂಡಿದ್ದಾರೆ. ಇನ್ನುಳಿದ 5 ಮತಗಳು ಅಸಿಂಧುಗೊಂಡಿವೆ..