ಬೈಕ್ ವೀಲಿಂಗ್ ಪುಂಡರಿಗೆ ಬಿಸಿ ಮುಟ್ಟಿಸಿದ ಪೋಲೀಸರು….!

ಬೈಕ್ ವೀಲಿಂಗ್ ಮಾಡಿದ ಪುಂಡರಿಗೆ ಗೌರಿಬಿದನೂರು ಪೋಲೀಸರು ಬಿಸಿ ಮುಟ್ಟಿಸಿದ್ದಾರೆ. ವಿದುರಾಶ್ವತ್ಥ ಹಾಗೂ ಹಿಂದುಪುರ ರಸ್ತೆಯಲ್ಲಿ ಈ ಪುಂಡರು ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದರು.

ಬೈಕ್ ವೀಲಿಂಗ್ ನ ಪುಂಡಾಟದಿಂದ ಸಾರ್ವಜನಿಕರು ಹೈರಾಣಾಗಿದ್ದರು. ವೀಲಿಂಗ್ ಮಾಡುತಿದ್ದ ಯುವಕರ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಂಡರಿಂದ ದ್ವಿಚಕ್ರ ವಾಹನವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಯುವಕರು ಅಂಚಿಕೊಂಡಿದ್ದರು.

Leave a Reply

Your email address will not be published. Required fields are marked *