ಬಮೂಲ್ ಚುನಾವಣೆ: ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದ ಬಿ.ಸಿ.ಆನಂದ್ ಗೆ ಪಾಠ ಕಲಿಸಬೇಕಿದೆ : ಬಿ.ಸಿ.ಆನಂದ್ ಸೋಲಿಸೋದೆ ನಮ್ಮ ಅಜೆಂಡಾ- ಜೆಡಿಎಸ್ ನ ಹುಸ್ಕೂರ್ ಆನಂದ್ ಗೆ ಬಾಹ್ಯ ಬೆಂಬಲ- ಮಾಜಿ‌ ಶಾಸಕ ಟಿ.ವೆಂಕಟರಮಣಯ್ಯ

ಅಂದು ನಾವು ಮಾಡಿದ ಆ ಮೂರು ತಪ್ಪುಗಳಿಂದ ಇಂದು ನೋವು ಅನುಭವಿಸುತ್ತಿದ್ದೇವೆ. ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಸೇರ್ಪಡೆಗೊಂಡ ಬಿ.ಸಿ ಆನಂದ್ ಗೆ ಬಮೂಲ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಮುಖಂಡರ ಒಮ್ಮತದ ಮೇರೆಗೆ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಟಿ.ಆನಂದ್ ಅವರಿಗೆ ಬಾಹ್ಯ ಬೆಂಬಲ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಬಿ.ಸಿ.ಆನಂದ್ ನಮ್ಮ ಪಕ್ಷದ ಸಹಕಾರದಿಂದ ಹಲವು ಅಧಿಕಾರಗಳನ್ನು ಅನುಭವಸಿ, ಒಂದು ಹಂತಕ್ಕೆ ಬೆಳೆದು ನಿಂತ ಮೇಲೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಬುದ್ಧಿ ಕಲಿಸುವ ಕಾಲ ಬಂದಿದೆ‌. ಆ ಕಾರಣದಿಂದ ನಮ್ಮ ಪಕ್ಷದಿಂದ‌ ಬಮೂಲ್ ಚುನಾವಣೆಗೆ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಆದರೆ, ಅವರ ನಾಮಪತ್ರಗಳನ್ನು ವಾಪಸ್ ಪಡೆಯುವಂತೆ ಮಾಡಿ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಅವರಿಗೆ ಬೆಂಬಲ‌ ಸೂಚಿಸಿದ್ದೇವೆ ಎಂದರು.

ನಮಗೆ ಅಧಿಕೃತವಾಗಿ ಜೆಡಿಎಸ್ ನಿಂದ ಬೆಂಬಲ ಬೇಡಿಕೆ ಪತ್ರ ಬಂದಿದ್ದು, ನಾವು ಈ ಕುರಿತು ಹೈಕಮಾಂಡ್ ಗಮನಕ್ಕೆ ತಂದು, ಎಲ್ಲರ ಒಮ್ಮತದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.

ನಾವು ಯಾವ ಬೇಡಿಕೆ ಇಡದೇ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಅವರಿಗೆ ಬಾಹ್ಯ ಬೆಂಬಲ ಸೂಚಿಸಿದ್ದೇವೆ. ತಾಲೂಕಿನ ರೈತರ ಅಭಿವೃದ್ಧಿಗಾಗಿ ಎಲ್ಲರು ಸಹಕರಿಸಬೇಕು ಎಂದು ತಿಳಿಸಿದರು.

ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹುಸ್ಕೂರ್ ಟಿ.ಆನಂದ್ ಮಾತನಾಡಿ, ನಮಗೆ ಬಾಹ್ಯ ಬೆಂಬಲ ಸೂಚಿಸಿದ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ. ನಮಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡ ಕೂಡಲೇ ಯಾವುದೇ ಷರತ್ತು ಹಾಕದೇ ಬಾಹ್ಯ ಬೆಂಬಲ‌ ಸೂಚಿಸಿದ್ದಾರೆ ಎಂದು. ಹೇಳಿದರು.

Leave a Reply

Your email address will not be published. Required fields are marked *