ಜಮೀನಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕಳವು

ಜಮೀನಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದೊಯ್ದಿರುವ ಘಟನೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ, ಶೆಟ್ಟರಹಳ್ಳಿ ಗ್ರಾಮದಲ್ಲಿ ನಡೆದಿದೆ….

ಅಪರಿಚಿತರು ಈ ಹಿಂದೆ ಕೂಡ ಹಲವು ಬಾರಿ ಜಮೀನಿಗೆ ಅತಿಕ್ರಮವಾಗಿ ಪ್ರವೇಶ ಮಾಡಿತ್ತಿದ್ದು, ಈ ಹಿನ್ನೆಲೆ ಜಮೀನಿನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಈಗ ಅದನ್ನು ಕೂಡ ಕದ್ದೊಯ್ದಿದ್ದಾರೆ….

ಈ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಕುರಿತು ದೂರುದಾರ ಮುರುಳಿ ಟಿ.ಎನ್ ಮಾತನಾಡಿ, ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ, ಶೆಟ್ಟರಹಳ್ಳಿ ಗ್ರಾಮದ ಸರ್ವೆ ನಂಬರ್ 115/2 ರ ಜಮೀನಿಗೆ ಈ ಹಿಂದೆ ಹಲವು ಬಾರಿ ನಮ್ಮ ಜಮೀನಿಗೆ ಯಾರೋ ಅಪರಿಚಿತರು ಉದ್ದೇಶಪೂರ್ವಕವಾಗಿ ಅತಿಕ್ರಮವಾಗಿ ಪ್ರವೇಶ ಮಾಡುತ್ತಿದ್ದು, ನಾನು ಕೆಲವರ ಸಲಹೆಯಂತೆ ಈ ಜಮೀನಿನಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಿದೆ. ಮೇ.8 ರಂದು ಸಂಜೆ 5.30 ಗಂಟೆಯ ಸಮಯದಲ್ಲಿ ಯಾರೋ ಅಪರಿಚಿತ ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ನಮ್ಮ ಜಮೀನಿನಲ್ಲಿ ನಾನು ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಮೇ.12 ರಂದು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದೇನೆ ಎಂದರು.

Leave a Reply

Your email address will not be published. Required fields are marked *