ವಿದ್ಯಾರ್ಜನೆಗಾಗಿ ಕಾದಿರುವ ಪುಟಾಣಿಗಳಿಗೆ ಶಾಲೆಯ ಬಾಗಿಲು ತೆರೆದಿದೆ, ತೊದಲು ನುಡಿಯುತ್ತಿದ್ದ ಮಕ್ಕಳು ಅಕ್ಷರಗಳ ಉಚ್ಛಾರಣೆ, ಬರೆಯಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆ ಇಂದು ನಗರದ ನ್ಯಾಷನಲ್ ಪ್ರೈಡ್ ಶಾಲೆಯ ಮೊದಲ ದಿನವಾದ ಇಂದು ಶಾಸ್ತ್ರಬದ್ದವಾಗಿಯೇ ಆರಂಭಿಸಲಾಗಿದೆ.
ನೂತನವಾಗಿ ಶಾಲೆಗೆ ದಾಖಲಾದ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ ಭಾಗವಹಿಸಿ ಜ್ಞಾನದ ದೇವತೆ ಸ್ವರತಿಯ ಅಶೀರ್ವಾದದೊಂದಿಗೆ ವಿದ್ಯೆ ಕಲಿಕೆಯನ್ನ ಆರಂಭಿಸಿದರು.
ಸಾಮಾನ್ಯವಾಗಿ ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ತಮ್ಮ ಮಕ್ಕಳ ಅಕ್ಷರಾಭ್ಯಾಸವನ್ನ ಮಾಡುತ್ತಾರೆ, ಈ ಪರಂಪರೆಯನ್ನೇ ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಅಕ್ಷರಾಭ್ಯಾಸವನ್ನ ಸಾಮೂಹಿಕವಾಗಿ ಮಾಡಲಾಯಿತು.
ಮೊದಲ ಅಕ್ಷರವಾಗಿ ಮಕ್ಕಳು ಕನ್ನಡ ವರ್ಣಮಾಲೆಯ ಅ ಆ ಇ ಈ ನ್ನು ಸ್ಲೇಟ್ ನಲ್ಲಿ ಬರೆದು ಶಾಸ್ತ್ರೋಕ್ತವಾಗಿ ಮೊದಲ ದಿನ ಆರಂಭಿಸಿದರು.
ಮಕ್ಕಳ ಜೊತೆಯಲ್ಲಿ ಬಂದ ಪೋಷಕರು ಅಕ್ಷರಭ್ಯಾಸದಲ್ಲಿ ಭಾಗಿಯಾಗಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಪುರಾಣಗಳಲ್ಲಿ ವಾಲ್ಮೀಕಿ ಮಹರ್ಷಿಗಳು ಲವಕುಶರಿಗೆ ಅಕ್ಷರಭ್ಯಾಸವನ್ನು ಮಾಡಿಸುವ ಮೂಲಕ ವಿದ್ಯೆಯನ್ನು ಪ್ರಾರಂಭಿಸಿದ್ದರು ಎಂಬ ಉಲ್ಲೇಖವಿದೆ. ಸರ್ವಧರ್ಮ ಸಮನ್ವಯತೆ ಸಾರುವ ನಿಟ್ಟಿನಲ್ಲಿ ಈ ಶಾಲೆ ಮುಂದಿದೆ. ಅದೇರೀತಿ ಶಿಸ್ತು ಮತ್ತು ಸಮಯ ಪಾಲನೆ ಶಾಲೆಯ ಪ್ರಮುಖ ಆದ್ಯತೆಯಾಗಿದೆ.
ತಾಯಿ ಸರಸ್ವತಿಯ ಆಶೀರ್ವಾದ ಮಗುವಿನ ಶಿಕ್ಷಣದ ಪ್ರಯಾಣದತ್ತ ಸುಗಮವಾಗಿ ಕರೆದೊಯುತ್ತದೆ ಎಂಬ ನಂಬಿಕೆಯೊಂದಿಗೆ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಪ್ರೀತಿಯನ್ನು ತುಂಬಲು ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸಲು ಅಕ್ಷರಾಭ್ಯಾಸ ಕಾರ್ಯಕ್ರಮವು ಸಹಕಾರಿಯಾಗಿದೆ ಎಂದು ಶಾಲಾ ಕಾರ್ಯದರ್ಶಿ ಸಿ ಎನ್ ಸತೀಶ್ ರಾಜ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಸಿ.ನಾಗರಾಜು, ಸುನಂದಾ, ಪ್ರಾಂಶುಪಾಲೆ ರಶ್ಮಿ ಸತೀಶ್ ರಾಜ್, ಅನುಸೂಯಾ, ಸಂಯೋಜಕಿ ತೇಜಸ್ವಿನಿ, ಶಿಕ್ಷಕ ವೃಂದ್ಧ, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.