ಇಂದು ಸಂಜೆ ದೊಡ್ಡಬಳ್ಳಾಪುರ ತಾಲೂಕಿನ ಹುಲುಕುಡಿ ತಪ್ಪಲಲ್ಲಿ ಬೈಕ್ ಸವಾರರ ಕಣ್ಣಿಗೆ ಚಿರತೆ ಕಂಡುಬಂದಿದೆ. ಕೂಡಲೇ ಮೊಬೈಲ್ ನಲ್ಲಿ ಫೋಟೋ ತೆಗೆದು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ವೀರಚಿಕ್ಕಪ್ಪ ಮತ್ತು ಕೆಂಪಯ್ಯ ಎಂಬುವರು ಹಳೇಕೋಟೆ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೆಟ್ಟದ ತಪ್ಪಲಿನ ತೋಟದ ಬಳಿ ಚಿರತೆ ಪ್ರತ್ಯಕ್ಷವಾಗಿದೆ.
ಹುಲುಕುಡಿ ಬೆಟ್ಟದಲ್ಲಿ ಚಿರತೆಗಳು ವಾಸವಾಗಿದ್ದು, ಆಗಾಗ ಜನರ ಕಣ್ಣಿಗೆ ಬಿಳುತ್ತಿರುತ್ತವೆ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುತ್ತವೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.