ಕೋಲಾರ: ನಗರದ ಅಮ್ಮವಾರಿಪೇಟೆಯ ಶ್ರೀ ಪ್ರಸನ್ನ ಅಂಜನೇಯಸ್ವಾಮಿಗೆ ಮುಂದಿನ ದಿನಗಳಲ್ಲಿ ವಿಶೇಷವಾದ ರಥವನ್ನು ನಾಲ್ಕು ಜನರ ಸಹಕಾರದೊಂದಿಗೆ ಮಾಡಿಸಿಕೊಡಲಾಗುತ್ತದೆ ಅದರಲ್ಲಿ ನನ್ನ ಕೊಡುಗೆ ಹೆಚ್ವಿರುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು
ಸೋಮವಾರ ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು ಮುಂದಿನ ವರ್ಷದ ಹೊಸ ರಥದೊಂದಿದೆ ಬ್ರಹ್ಮ ರಥೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ದೇವರ ಕೆಲಸಕ್ಕೆ ಸದಾಕಾಲವೂ ನಿಮ್ಮ ಜೊತೆಗೆ ಇರತ್ತೇವೆ ದೇವರ ಸೇವೆ ಮಾಡಲು ನಮಗೂ ಅತಿವ ಸಂತೋಷ ತರುತ್ತದೆ ಈಗಾಗಲೇ ನಗರಭಾಗದಲ್ಲಿರುವ ಕೀಲುಕೋಟೆ ಅಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ಯಾರೇ ಬರಲಿ ಬಿಡಲಿ ದೇವಾಲಯಗಳ ನಿರ್ಮಾಣಕ್ಕೆ ಕಾರ್ಯಕ್ಕೆ ಸದಾಸಿದ್ದವಿದ್ದೇವೆ ಎಂದರು.
ಹಿಂದೂ ಧರ್ಮದಲ್ಲಿ ದೇವತಾರಾಧನೆಗೆ ಅದರದ್ದೇ ಆದ ಮಹತ್ವವಿದೆ. ಕಷ್ಟ ಬಂದಾಗ, ಒಳ್ಳೆಯ ಕೆಲಸಗಳನ್ನು ಆರಂಭಿಸಬೇಕೆಂದಾಗ, ಮನಸ್ಸಿಗೆ ಖುಷಿ ಮೂಡಿದಾಗ ಎಲ್ಲರೂ ದೇವರ ಪೂಜೆಯಲ್ಲಿ ಸಂತೃಪ್ತಿ ಇಂತಹ ಸಂದರ್ಭದಲ್ಲಿ ಎಲ್ಲರೂ ದೇವರ ಮೊರೆ ಹೋಗುತ್ತಾರೆ. ಯಶಸ್ಸಿಗೆ ಇರುವ ಅಡ್ಡಿಯನ್ನು ಪರಿಹರಿಸಲು ಪ್ರಾರ್ಥಿಸಿಕೊಳ್ಳುತ್ತಾರೆ. ನಮ್ಮಲ್ಲಿ ಪ್ರಾರ್ಥನೆ, ಪೂಜೆಗಳ ಮೂಲಕ ಯಶಸ್ಸು, ಕಷ್ಟ ಪರಿಹಾರಕ್ಕೆ ಈ ಪೂಜೆಗಳು ಒಳ್ಳೆಯದು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಸದಸ್ಯ ಗಂಗಮ್ಮನಪಾಳ್ಯ ರಾಮಯ್ಯ, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ದೇವಾಲಯ ಸಮಿತಿ ಸದಸ್ಯರಾದ ರಾಜು, ಸುಬ್ರಮಣಿ, ಬಾಲಾಜಿ, ಅರ್ಜುನ್, ರೂಪೇಶ್, ಅಭಿಲಾಷ್, ಗಂಗಮ್ಮನಪಾಳ್ಯ ಚಂದ್ರು, ಮಹೇಶ್ ಮುಂತಾದವರು ಇದ್ದರು.