ಹೆದ್ದಾರಿಯ ನಡು ರಸ್ತೆಯಲ್ಲೇ ಸರಕು ಸಾಗಾಣಿಕೆ ಕಂಟೇನರ್ ಹೊತ್ತಿ ಉರಿದಿರುವ ಘಟನೆ ಕ್ಯಾತ್ಸಂದ್ರದ ಪವಿತ್ರ ಹೋಟೆಲ್ ಮುಂಭಾಗದಲ್ಲಿ ಭಾನುವಾರ ನಡೆದಿದೆ.
ಲಾರಿ ಚಾಲಕ ಬೆಂಕಿ ಕಾಣಿಸಿಕೊಂಡ ಕೂಡಲೇ ಲಾರಿಯಿಂದ ಹೊರಗೆ ನೆಗೆದು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಲಾರಿಯಲ್ಲಿ ಯಾವುದೇ ಸರಕುಗಳಿರಲಿಲ್ಲವಾದ್ದರಿಂದ ಆಸ್ತಿ ನಷ್ಟ, ಯಾವುದೇ ಗಾಯ ಸಂಭವಿಸಿಲ್ಲ. ಆದರೆ ಲಾರಿಗೆ ಸಂಬಂಧಿಸಿದ ಕಾಗದ ಪತ್ರ ಸೇರಿದಂತೆ ಸುಮಾರು 10 ಲಕ್ಷ ರೂ. ನಷ್ಟವಾಗಿರುವುದಾಗಿ ಚಾಲಕ ಅವಲತ್ತುಕೊಂಡಿದ್ದಾನೆ. ಶಿರಾ ಕಡೆಯಿಂದ ವಾಹನವು ಬೆಂಗಳೂರಿಗೆ ತೆರಳುತ್ತಿತ್ತು.
ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಯಾತ್ಯಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.