ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿಟಿಕಿಯಲ್ಲಿದ್ದ ಬೀಗದ ಕೀ ತೆಗೆದುಕೊಂಡು ಡೋರ್ ಓಪನ್ ಮಾಡಿ ಮನೆಯೊಳಗೆ ಒಳಹೊಕ್ಕ ಕಳ್ಳರು 1 ಲಕ್ಷದ 85 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, 8 ಗ್ರಾಂ ತೂಕದ ಒಂದು ಕೊರಳ ಚೈನ್, 5 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಸೇರಿದಂತೆ 5000 ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಈ ಘಟನೆ ದೊಡ್ಡಬಳ್ಳಾಪುರ ನಗರದ ರಂಗಪ್ಪ ಸರ್ಕಲ್ ಬಳಿಯ ರಾಘವೇಂದ್ರ ಸ್ವಾಮಿ ದೇವಸ್ಥಾನದ ಎದರು ಇರುವ ಅನಂತ್ ಕುಮಾರ್ ಕೆ ಎಂಬುವವರ ಮನೆಯಲ್ಲಿ ನಡೆದಿದೆ.
ಏ.29 ರಂದು ಘಟನೆ ನಡೆದಿದ್ದು, ಎಲ್ಲಾ ಕಡೆ ಹುಡುಕಾಡಿದ ನಂತರ ಒಡವೆಗಳು ಸಿಗದ ಕಾರಣ ತಡವಾಗಿ ಅಂದರೆ ಮೇ.2ರಂದು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿರುತ್ತದೆ.
ದೂರುದಾರ ಅನಂತ್ ಕುಮಾರ್ ತನ್ನ ಹೆಂಡತಿಯೊಂದಿಗೆ ಕಳೆದ ಎರಡು ವರ್ಷಗಳಿಂದ ರಂಗಪ್ಪ ಸರ್ಕಲ್ ಬಳಿಯ ರಾಘವೇಂದ್ರ ಸ್ವಾಮಿ ದೇವಸ್ಥಾನದ ಎದರು ಇರುವ ಮನೆಯೊಂದನ್ನು ಲೀಸ್ ಗೆ ಪಡೆದು ವಾಸವಾಗಿದ್ದರು. ಗಂಡ ಹೆಂಡತಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಲೀಸ್ ಗೆ ಪಡೆದ ಮನೆಯಲ್ಲಿ ಮನೆಯ ಡೋರ್ ಲಾಕ್ ಕೀಯನ್ನು ಮನೆಯ ಬಾಗಿಲು ಪಕ್ಕದ ಕಿಟಕಿಯಲ್ಲಿ ಇಡುತ್ತಿದ್ದೇವು. ನಾವು ಡೋರ್ ಲಾಕ್ ಮಾಡಿ ಕೀಯನ್ನು ಕಿಟಕಿಯಲ್ಲಿ ಇಡುವ ವಿಚಾರ ಮನೆಯ ಪಕ್ಕದಲ್ಲಿ ವಾಸವಾಗಿರುವ ದೂರುದಾರನ ಚಿಕ್ಕಮ್ಮನ ಮಗಳು ಆಕೆಯ ಗಂಡ ನೋಡಿದ್ದರು. ನಾವು ಮನೆಯಲ್ಲಿ ಇಲ್ಲದೆ ಇರುವಾಗ ಚಿಕ್ಕಮ್ಮನ ಮಗಳು ಆಕೆಯ ಗಂಡ ಕೆಲವು ಬಾರಿ ಮನೆಯ ಫ್ರಿಡ್ಜ್ ನಲ್ಲಿ ತರಕಾರಿ ಇಡುವ ಸಲುವಾಗಿ ಮನೆಯ ಡೋರ್ ಲಾಕ್ ತೆಗೆದು ಮನೆಯ ಒಳಗೆ ಬಂದು ಹೋಗುತ್ತಿದ್ದರು ಎಂದು ದೂರುದಾರ ಅನಂತ್ ಕುಮಾರ್ ತಿಳಿಸಿದ್ದಾರೆ.
ನಾವು ಒಡವೆಗಳನ್ನು ಮನೆಯಲ್ಲಿನ ಬೀರುವಿನಲ್ಲಿ ಇಡುತ್ತಿದ್ದೆವು ಈ ಒಡವೆಗಳನ್ನು ಮಾ.31 ರಂದು ದೂರುದಾರ ನೋಡಿದ್ದೆವು, ನಂತರ ಏ.29ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ಬೀರು ತೆಗೆದು ನೋಡಿದಾಗ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳ ಪೈಕಿ ಒಂದು ಚಿನ್ನದ ನೆಕ್ಲೇಸ್ – ಸುಮಾರು 10 ಗ್ರಾಂ, ಒಂದು ಕೊರಳ ಚೈನ್-ಸುಮಾರು 8 ಗ್ರಾಂ ಹಾಗೂ ಎರಡು ಚಿನ್ನದ ಉಂಗುರಗಳು – ಸುಮಾರು 5 ಗ್ರಾಂ ಹಾಗೂ 5000 ರೂ. ನಗದು ಹಣವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಇವುಗಳ ಅಂದಾಜು ಬೆಲೆ ಸುಮಾರು 1,85,000 ರೂಪಾಯಿಗಳು ಆಗಿರುತ್ತದೆ ಎಂದು ಹೇಳಿದ್ದಾರೆ.
ಮನೆಯ ಕಿಟಕಿಯಲ್ಲಿ ಇಟ್ಟಿದ್ದ ಡೋರ್ ಲಾಕ್ ಕೀ ಬಳಸಿದ ಕಳ್ಳರು ಮನೆಯೊಳಗೆ ಬಂದು ಒಡವೆಗಳನ್ನು ಕಳವು ಮಾಡಿರುವಂತೆ ಕಂಡು ಬಂದಿರುತ್ತದೆ ಎಂದು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.