ಬಮೂಲ್ ಚುನಾವಣೆ ಹಾಗೂ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಚುನಾವಣೆ ಬಗ್ಗೆ ಚುಂಚೇಗೌಡರು ಏನಂದರು….?

ದೊಡ್ಡಬಳ್ಳಾಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್ಡಿ) ನಿಯಮಿತದ ಚುನಾವಣೆಯ ಅಂತಿಮ ಫಲಿತಾಂಶ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕಟವಾಗಿದ್ದು,

ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಕಣ್ಣು ನೆಟ್ಟಿದ್ದು, ಚರ್ಚೆ ತೀವ್ರಗೊಂಡಿದೆ.

ಈ ಕುರಿತಾಗಿ “ಪಬ್ಲಿಕ್ ಮಿರ್ಚಿ” ಯೊಂದಿಗೆ ದೊಡ್ಡಬಳ್ಳಾಪುರ ಯೋಜನಾ ಆಯೋಗದ ಅಧ್ಯಕ್ಷ ಚುಂಚೇಗೌಡ ಮಾತನಾಡಿ, ಎಲ್ಲಾ ಪಕ್ಷದಿಂದ ಐದೈದು ಮಂದಿ ಗೆದ್ದಿದ್ದಾರೆ. ಯಾರು ಅನ್ಯಾವಾಗದೇ 20ತಿಂಗಳಂತೆ ಒಬ್ಬೊಬ್ಬರು ಅಧಿಕಾರವನ್ನು ಹಂಚಿಕೊಂಡು ಸಹಕಾರದಿಂದ ಇರೋಣ ಎಂದು ಮಾತನಾಡಿಕೊಂಡಿದ್ದೇವೆ. ಈ ನಿರ್ಧಾರವನ್ನು ಯಾರೂ ಒಪ್ಪದ ಪಕ್ಷದಲ್ಲಿ ನಾವು ಬೇರೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶತಾಯಗತಾಯ ಪಿಎಲ್ ಡಿ‌ ಬ್ಯಾಂಕ್ ಗೆ ಕಾಂಗ್ರೆಸ್ ನಿಂದಲೇ ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು‌.

ಬಮೂಲ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ಭೂ ಮಂಜೂರಾತಿ‌ ಸಮಿತಿ ಸದಸ್ಯ ಗಂಗಸಂದ್ರ ಜಿ.ಕೆ.ಶ್ರೀಧರ್, ರಾಮಣ್ಣ, ಕಲ್ಲುದೇವನಹಳ್ಳಿ ಮರೀಗೌಡ, ಸಕ್ಕರೆಗೊಲ್ಲಹಳ್ಳಿ ರುದ್ರಮೂರ್ತಿ, ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರೆ ಹುಸ್ಕೂರ್ ಆನಂದ್ ಆಕಾಂಕ್ಷಿಗಳಾಗಿದ್ದರೆ. ಈ ಹಿನ್ನೆಲೆ ಇದೇ ಭಾನುವಾರ ಸಭೆ ಕರೆದಿದ್ದೇವೆ. ಅಂದು ಒಬ್ಬರನ್ನು ಅಂತಿಮ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತೇವೆ. ಜೆಡಿಎಸ್ ಪಕ್ಷದವರು ಬಿಜೆಪಿ ಜೊತೆ ಬಿಟ್ಟು ನಮ್ಮ ಕಾಂಗ್ರೆಸ್ ಜೊತೆ ಬಂದು ಮೈತ್ರಿ ಮಾಡಿಕೊಳ್ಳುವುದಕ್ಕೆ ಬಂದರೆ ನಾವು ಸ್ವಾಗತಿಸುತ್ತೇವೆ ಎಂದರು.

Leave a Reply

Your email address will not be published. Required fields are marked *