ನಮ್ಮದು ಬಲಿಷ್ಠವಾದ ಸರ್ಕಾರ. ನಿಮ್ಮ ಋಣವನ್ನು ತೀರಿಸುವ ಕೆಲಸ ಮಾಡಲು ಯತ್ನಸುತ್ತೇವೆ. ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತನ್ನು ಈಡೇರಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಶೇ.90ರಷ್ಟು ಜನರಿಗೆ ಮನೆಗೆ ದೀಪ, ಹಸಿದವರಿಗೆ ಅಕ್ಕಿ, ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಕ್ತಿ ಯೋಜನೆ ಸೇರಿದಂತೆ ಐದು ಗ್ಯಾರೆಂಟಿ ಯೋಜನೆಗಳನ್ನು ತಂದು ಯಶಸ್ವಿಯಾಗಿದ್ದೇವೆ.
ವಿರೋಧ ಪಕ್ಷದವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಯಾರಿಗಾಗಿ, ಯಾತಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದರೆ ಎಂಬುದು ಗೊತ್ತಿಲ್ಲ. ರೈತರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆಕ್ರೋಶವಂತೆ ಆಕ್ರೋಶ ಯಾರ ಮೇಲೆ ಆಕ್ರೋಶ, ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿ ಎಂದು ಬಿಜೆಪಿ ವಿರುದ್ಧ ಹರಿಹಾದ್ದರು.
ಜನಸೇವೆಯಲ್ಲಿ ಪ್ರಾಮಾಣಿಕತೆ ಇರಲಿ. ಕಾಂಗ್ರೆಸ್ ಅಧಿಕಾರ ಬಂದಕೂಡಲೇ ಎಲ್ಲರಿಗೂ ಅಧಿಕಾರ ಕೊಡುತ್ತೇವೆ. ಉಚಿತ ಶಿಕ್ಷಣ, ಪೋಡಿ ಮುಕ್ತ ಗ್ರಾಮ, ಉಚಿತ ಪಹಣಿ ಕೊಡುವುದು ಸೇರಿದಂತೆ ಇನ್ನಿತರೆ ಜನಸ್ನೇಹಿ ಕಾರ್ಯಕ್ರಮಗಳನ್ನು ತಂದಿದ್ದೇವೆ. ಇಂತಹದ್ದೊಂದು ಯೋಜನೆ, ಸೌಲಭ್ಯ ಬಿಜೆಪಿ ಸರ್ಕಾರವಿದ್ದಾಗ ತಂದಿದೆಯೇ..? ಎಂದು ಪ್ರಶ್ನೆ ಮಾಡಿದರು.
ಬಿಜೆಪಿ, ಜೆಡಿಎಸ್ ನವರೇ ಬಡವರು, ರೈತರಿಗೆ, ಮಹಿಳೆಯರಿಗೆ, ನಿರುದ್ಯೋಗಸ್ಥರಿಗೆ ಏನು ಮಾಡಿದ್ದೀರಿ…? ಕಮಲ ಕೆಸರಿನಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಈ “ಕೈ” ಅಧಿಕಾರದಲ್ಲಿದ್ದರೆ ಚೆಂದ ಎಂದರು.