ಪ್ರಬಲ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಲ್ಕು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (28) ಹಾಗೂ ಅಭಿಷೇಕ್ ಶರ್ಮಾ (40)ರನ್ ಉತ್ತಮ ಆರಂಭ ನೀಡಿ ವಿಲ್ ಜಾಕ್ಸ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದರು.
ನಂತರ ಬಂದ ಇಶಾನ್ ಕಿಶನ್ (2) ನಿತೀಶ್ ರೆಡ್ಡಿ (19) ಹೆಚ್ಚು ಪರಿಣಾಮಕಾರಿ ಆಗಲಿಲ್ಲ, ಮದ್ಯಮ ಕ್ರಮಾಂಕದ ಆಟಗಾರ ಕ್ಲಾಸನ್ (37) ಹಾಗೂ ಅಂಕಿತ್ ವಮಾ೯ (18) ರನ್ ಪೇರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ (26) ರಿಕಲ್ಟನ್ (31), ಮಧ್ಯಮ ಕ್ರಮಾಂಕದ ಆಟಗಾರರಾದ ವಿಲ್ ಜಾಕ್ಸ್(36), ಸೂರ್ಯ ಕುಮಾರ್ ಯಾದವ್ (26), ಪಾಂಡ್ಯ (21) ಹಾಗೂ ತಿಲಕ್ ವಮಾ೯(21) ಸಂಘಟಿತ ಹೋರಾಟದಿಂದ ನಾಲ್ಕು ವಿಕೆಟ್ಗಳ ಜಯ ದಾಖಲಿಸಿತು.