ಸ್ನೇಹಿತರ ಜೊತೆ ಬಾವಿಯಲ್ಲಿ ಈಜಾಡಲು ಹೋಗಿ ಈಜು ಬಾರದೇ ನೀರಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕರಾಯಪ್ಪನಹಳ್ಳಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮೃತ ಯುವಕ ದೊಡ್ಡಬಳ್ಳಾಪುರ ಕರೇನಹಳ್ಳಿ ನಿವಾಸಿ ತೇಜಸ್(22) ಎಂದು ಗುರುತಿಸಲಾಗಿದೆ. ಮೃತ ಯುವಕ ಬಿಕಾಂ ಓದುತ್ತಿದ್ದ ಎಂದು ತಿಳಿದು ಬಂದಿದೆ.
ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ಚಿಕರಾಯಪ್ಪನಹಳ್ಳಿ ಕೆರೆಯೊಂದರ ಸಮೀಪದ ಸುಮಾರು 15 ಅಡಿ ನೀರಿದ್ದ ಬಾವಿಯಲ್ಲಿ ಈಜಾಡಲು ದೊಡ್ಡಬಳ್ಳಾಪುರದಿಂದ ಸುಮಾರು 6 ಮಂದಿ ಸ್ನೇಹಿತರ ಜೊತೆಗೂಡಿ ಬಂದಿದ್ದು, 6 ಮಂದಿಯು ಬಾವಿಗೆ ಧುಮುಕಿ ಈಜಾಡುತ್ತಿದ್ದರು. ದಿಢೀರನೆ ಮಳೆ ಬಂದಿದ್ದರಿಂದ 5 ಮಂದಿ ಯುವಕರು ಬಾವಿಯಿಂದ ದಡಕ್ಕೆ ಬಂದಿದ್ದಾರೆ. ಒಬ್ಬ ಮಾತ್ರ ಬಾವಿಯ ತಳಕ್ಕೆ ಹೋಗಿ ಜೇಡಿಮಣ್ಣಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…