ನಗರದ ಬಸವೇಶ್ವರನಗರ ವಾರ್ಡಿನ ಅಶ್ವತ್ ಕಟ್ಟೆ ಬಳಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಅವರ ನೇತೃತ್ವದಲ್ಲಿಂದು ಬೀಟ್ ಸಭೆ ಏರ್ಪಡಿಸಲಾಗಿತ್ತು.
ಸಾರ್ವಜನಿಕರಿಗೆ ಸರಗಳ್ಳತನ, ಮನೆಗಳ್ಳತನ, ಸೈಬರ್ ಕ್ರೈಂ, ಸಂಚಾರಿ ನಿಯಮಗಳು, ಅಕ್ರಮ ಮದ್ಯ ಮಾರಾಟ, ಕ್ರಿಕೆಟ್ ಬೆಟ್ಟಿಂಗ್, ಗಾಂಜಾ ಸೇವನೆ ಮತ್ತು ಮಾರಾಟ, ಮೀಟರ್ ಬಡ್ಡಿ, ವೇಶ್ಯಾವಾಟಿಕೆ ಸೇರಿಂದತೆ ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಎಚ್ಚರಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಯಿತು.
ಕಾನೂನು ಬಾಹಿರ ವಿಷಯಗಳ ಬಗ್ಗೆ ವಾರ್ಡಿನಲ್ಲಿ ಯಾವುದೇ ಮಾಹಿತಿ ಕಂಡುಬಂದರೂ ಕೂಡಲೇ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಲಾಯಿತು.
ನಂತರ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಕೆಲವು ಸಲಹೆ ಸೂಚನೆಗಳು ಹಾಗೂ ಕುಂದುಕೊರತೆಗಳನ್ನು ಪೊಲೀಸ್ ಇನ್ಸ್ ಪೆಕ್ಟರ್ ಅವರ ಗಮನಕ್ಕೆ ತರಲಾಯಿತು. ಸಾರ್ವಜನಿಕರು ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸುವದಾಗಿ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಸಭೆಯಲ್ಲಿ ನಗರಸಭಾ ಸದಸ್ಯ ಪದ್ಮನಾಭ, ವಾರ್ಡಿನ ಹಿರಿಯ ಮುಖಂಡ ಕೃಷ್ಣಪ್ಪ, ಮಂಜುಳಾ, ಜೈರಾಮ್, ಸಬ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ, ಮತ್ತು ಬೀಟ್ ಸಿಬ್ಬಂದಿ ಶಿವಾನಂದ ಹಾಗೂ ಸಿದ್ದಲಿಂಗ ಪೂಜಾರಿ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.