ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೀಗಾಗಿ ಬಿಸಿಲಲ್ಲಿ ಸ್ವಲ್ಪ ಅಡ್ಡಾಡಿದರೂ ದಾಹವಾಗಿ ನೀರು ಕುಡಿಯೋಣ ಎನಿಸುತ್ತದೆ. ಮನುಷ್ಯರಾದ ನಮಗೆ ಈ ರೀತಿಯಾದರೆ ಮೂಕ ಪ್ರಾಣಿಗಳ ಕಥೆಯೇನು…..?
ನೀರನ್ನು ಅರಿಸಿ ನಗರದ ಪ್ರವಾಸಿ ಮಂದಿರಕ್ಕೆ ಬಂದ ಕೋತಿಗಳು, ಸಸಿಗಳಿಗೆ ಪೈಪಿನಲ್ಲಿ ನೀರು ಬಿಟ್ಟಿರುವುದನ್ನು ಗಮನಿಸಿ ಯಾರು ಇಲ್ಲದೇ ಇರುವುದನ್ನು ಕಂಡು ಪೈಪಿನಲ್ಲಿ ನೀರನ್ನು ಕುಡಿದು ದಣಿವು ತೀರಿಸಿಕೊಂಡವು.
ಹಾಗಾಗಿ ಸಾರ್ವಜನಿಕರು ಇನ್ನಾದರೂ ಬೇಸಿಗೆ ಮುಗಿಯುವವರೆಗೆ ಅಂಗಡಿಗಳ ಮುಂದೆ ನೀರಿನ ತೊಟ್ಟಿ, ಮರದಲ್ಲಿ ನೀರಿನ ಬಾಟಲಿಗಳನ್ನು ಕಟ್ಟಿ ಮೂಕಪ್ರಾಣಿ ಮತ್ತು ಪಕ್ಷಿಗಳ ದಾಹ ತೀರಿಸುವ ಕಾರ್ಯಗಳನ್ನು ಮಾಡಬೇಕಾಗಿದೆ…
ಮಾ. 8ರಂದು ಹಾಗೂ 9ರಂದು ಹೆಚ್ಚು ಬಿಸಿಲು ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ಎರಡು ದಿನಗಳಲ್ಲಿ ದಿನದಲ್ಲಿ ಬಿಸಿಲಿನ ತಾಪಮಾನ ಕನಿಷ್ಟ 19 ಡಿಗ್ರಿ ಸೆಲ್ಸಿಯಸ್ ನಿಂದ ಗರಿಷ್ಠ 33.49 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ ಎಂದು ಹೇಳಲಾಗಿದೆ.