ಜಿಲ್ಲೆಯಲ್ಲಿ ಮೇ.2 ರಿಂದ 4ರವರೆಗೆ ಅಂಚೆ ಮತದಾನ

ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಸೇವೆಗಳಲ್ಲಿ ಚುನಾವಣಾ ದಿನದಂದು ಕಾರ್ಯ ನಿರ್ವಹಿಸುತ್ತಿರುವ ಗೈರು ಹಾಜರಿ ಮತದಾರರಿಗೆ ಅಂಚೆ ಮತದಾನ ಕಾರ್ಯವು ಮೇ 02(ಮಂಗಳವಾರ) ರಿಂದ 04(ಗುರುವಾರ) ರವರೆಗೆ ನಡೆಯಲಿದೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತದಾನವು ತಾಲ್ಲೂಕು ಆಡಳಿತ ಸೌಧ, ಗ್ರೇಡ್-2 ತಹಶೀಲ್ದಾರ್ ರವರ ಕೊಠಡಿಯಲ್ಲಿ ನಡೆಯಲಿದೆ. ಅಂಚೆ ಮತದಾನ ಕೇಂದ್ರದ (ಪಿ.ವಿ.ಸಿ) ಮೇಲ್ವಿಚಾರಣೆಗಾಗಿ ಶಾಲಾ ಶಿಕ್ಷಣ ಇಲಾಖೆಯ ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಕ್ಷೇತ್ರ ಸಮನ್ವಯಾಧಿಕಾರಿ ಮಂಜುಳ ಅವರನ್ನು ಗೆಜೆಟೆಡ್ ಅಧಿಕಾರಿಯಾಗಿ ಹಾಗೂ ದೇವನಹಳ್ಳಿ ತಾಲ್ಲೂಕು ಕಛೇರಿಯ ಗ್ರೇಡ್-2 ತಹಶೀಲ್ದಾರ್ ಉಷಾ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತದಾನವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾದಗೊಂಡನಹಳ್ಳಿ, ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಅಂಚೆ ಮತದಾನ ಕೇಂದ್ರದ ಮೇಲ್ವಿಚಾರಣೆಗಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಉಪ ಖಜಾನೆಯ ಸಹಾಯಕ ನಿರ್ದೇಶಕರು ರವಿಕುಮಾರ್ ಅವರನ್ನು ಗೆಜೆಟೆಡ್ ಅಧಿಕಾರಿಯಾಗಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಕಛೇರಿಯ ಗ್ರೇಡ್-2 ತಹಶೀಲ್ದಾರ್ ಎನ್ ಆರ್ ಕರಿಯಾ ನಾಯ್ಕ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತದಾನವು ತಾಲ್ಲೂಕು ಕಛೇರಿ ಸಭಾಂಗಣ, ನೆಲಮಂಗಲದಲ್ಲಿ ನಡೆಯಲಿದೆ. ಅಂಚೆ ಮತದಾನ ಕೇಂದ್ರದ ಮೇಲ್ವಿಚಾರಣೆಗಾಗಿ ನೆಲಮಂಗಲ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗೆಜೆಟೆಡ್ ಮ್ಯಾನೇಜರ್ ಕೆ.ಎನ್ ರವೀಂದ್ರನಾಥ ಅವರನ್ನು ಗೆಜೆಟೆಡ್ ಅಧಿಕಾರಿಯನ್ನಾಗಿ ಹಾಗೂ ನೆಲಮಂಗಲ ತಾಲ್ಲೂಕು ಕಛೇರಿಯ ಗ್ರೇಡ್-2 ತಹಶೀಲ್ದಾರ್ ವಿ ಭಾಗ್ಯ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
178- ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗೈರು ಹಾಜರಿ ಮತದಾರರು ಇಲ್ಲದ ಕಾರಣ ಅಂಚೆ ಮತದಾನ ಇರುವುದಿಲ್ಲ.

2023ರ ಮೇ 02, 03 ಹಾಗೂ 04 ರಂದು ಬೆಳಿಗ್ಗೆ 9.00 ಗಂಟೆಯಿಂದ 5.00 ಗಂಟೆಯವರೆಗೆ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತದಾನ ನಡೆಯಲಿದೆ.
ವಿವಿಧ ಇಲಾಖೆಗಳಲ್ಲಿ ಅಗತ್ಯ ಸೇವೆಗಳಲ್ಲಿ ಚುನಾವಣಾ ದಿನಾಂಕದಂದು ಕಾರ್ಯನಿರ್ವಹಿಸುತ್ತಿರುವ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ನಿಗದಿತ ಸಮಯ, ಸ್ಥಳದಲ್ಲಿ ಹಾಜರಾಗಿ ಅಂಚೆ ಮತದಾನ ಕಾರ್ಯನಿರ್ವಹಿಸುವಂತೆ ಸೂಚಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್ ಲತಾ ಅವರು ಕೋರಿರುತ್ತಾರೆ.

Leave a Reply

Your email address will not be published. Required fields are marked *