ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ಮನೆಯ ಜವಾಬ್ಧಾರಿಯೊತ್ತು ಕುಟುಂಬಕ್ಕೆ ಆಸರೆಯಾಗಿದ್ದ ಮಗ ರಘು ಇತ್ತೀಚೆಗೆ ನ್ಯೂಮೋನಿಯ ಸಮಸ್ಯೆಯಿಂದ ಅಕಾಲಿಕ ಮರಣ ಹೊಂದಿದ್ದರು.
ಈ ವಿಷಯ ತಿಳಿದ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ವಿ ಸಂಘದ ವತಿಯಿಂದ ಇಂದು ಮೃತರ ತಾಯಿ ರತ್ನಮ್ಮ ರವರಿಗೆ ಧನ ಸಹಾಯ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಅವರ ನೋವಿನಲ್ಲಿ ಭಾಗಿಯಾದರು.
ಹೀಗೆ ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘವೂ ಈ ಹಿಂದೆ ಸಹ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರ ಗೌಡ, ಕಾಲೇಜಿನ ಪ್ರಾಧ್ಯಾಪಕ ಶ್ರೀನಿವಾಸ್, ಸಂಘದ ಖಜಾಂಜಿ ಮಹೇಶ್, ಸಂಘದ ನಿರ್ದೇಶಕ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.