ತೆಂಗಿನ ಕಾಯಿ ಗೋದಾಮಿನಲ್ಲಿ ಬೆಂಕಿ: ಅಪಾರ ಪ್ರಮಾಣದ ತೆಂಗಿನ ಕಾಯಿ ಸುಟ್ಟುಕರಕಲು: ಸಂಕಷ್ಟದಲ್ಲಿ ರೈತ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ, ಹೊಸಕಿಪಾಳ್ಯ ಗ್ರಾಮದಲ್ಲಿ ತೆಂಗಿನಕಾಯಿ ಗೋದಾಮಿನಲ್ಲಿ‌ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 50 ರಿಂದ 60 ಸಾವಿರ ತೆಂಗಿನಕಾಯಿ ಸುಟ್ಟು ಕರಕಲಾಗಿದೆ.

ಗೋದಾಮಿನಲ್ಲಿ ಮಾಲೀಕರು ಯಾರು ಇಲ್ಲದ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ.

ಗೋದಾಮಿನಲ್ಲಿ ಸುಮಾರು 60 ಸಾವಿರ ತೆಂಗಿನಕಾಯಿಗಳನ್ನು ಶೇಖರಿಸಲಾಗಿತ್ತು. ಅದರಲ್ಲಿ ಸುಮಾರು 50 ರಿಂದ 60 ಸಾವಿರ ತೆಂಗಿನಕಾಯಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.

ಅಪಾರ ಪ್ರಮಾಣದ ತೆಂಗಿನಕಾಯಿಗಳನ್ನು ಕಳೆದುಕೊಂಡ ಮಾಲೀಕರು ಸಂಕಷ್ಟದಲ್ಲಿದ್ದು, ಇದಕ್ಕೆ ಕಾರಣವಾದವರನ್ನು ಕೂಡಲೇ ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

One thought on “ತೆಂಗಿನ ಕಾಯಿ ಗೋದಾಮಿನಲ್ಲಿ ಬೆಂಕಿ: ಅಪಾರ ಪ್ರಮಾಣದ ತೆಂಗಿನ ಕಾಯಿ ಸುಟ್ಟುಕರಕಲು: ಸಂಕಷ್ಟದಲ್ಲಿ ರೈತ

Leave a Reply

Your email address will not be published. Required fields are marked *