ಶೀಘ್ರದಲ್ಲೇ ಶಾಧಿ ಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ- ಸಚಿವ ಕೆ.ಎಚ್ ಮುನಿಯಪ್ಪ

ರಂಜಾನ್ ಹಬ್ಬದ ಪ್ರಯುಕ್ತ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್ ಮುನಿಯಪ್ಪ ಇಂದು ದೇವನಹಳ್ಳಿಯ ಈದ್ಗಾ ಮೈದಾನಕ್ಕೆ ಬೇಟಿ ನೀಡಿ ಮುಸಲ್ಮಾನ ಬಾಂದವರೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ನಂತರ ಮಾತನಾಡಿದ ಸಚಿವ,
ಕ್ಷೇತ್ರದಲ್ಲಿ ಶಾಸಕನಾಗಿ ಎರಡು ವರ್ಷ ಕಳೆದಿದ್ದು, ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಾಗುತ್ತಿದೆ. ಮುಸಲ್ಮಾನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ವತೋಮುಖ ಅಭಿವೃದ್ಧಿಗೆ ಒತ್ತನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಸಮಸ್ತ ಮುಸಲ್ಮಾನ ಬಾಂದವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಅಲ್ಲಾಹು ಕಾಲ ಕಾಲಕ್ಕೆ ಮಳೆ, ಸಮೃದ್ಧ ಬೆಳೆ ಕರುಣಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಮುಸಲ್ಮಾನರ ವಿಕಾಸಕ್ಕಾಗಿ ಸದಾ ಸಿದ್ಧನಿದ್ದು ಯಾವುದೇ ಕೆಲಸವಾದರೂ ಖಂಡಿತ ಮಾಡಿಕೊಡಲಾಗುತ್ತದೆ. ಅತಿ ಶೀಘ್ರವಾಗಿ ಶಾಧಿ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಗನ್ನಾಥ್ ,ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಎಸ್. ಆರ್. ರವಿಕುಮಾರ್,
ಇಸ್ಮಾಲ್ ಹುಸೇನ್, ನಯಾಜ್ ಪಾಷ, ಹ್ಯಾರೀಸ್, ಸಲೀಂ, ಸಬ್ಬೀರ್ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!