ನಿಧಿ ಕಳ್ಳರ ಹಾವಳಿ: ಮುಂದುವರಿದ ಪುರಾತನ ದೇವಾಲಯಗಳ ಹಾನಿ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಯದ್ದಲಹಳ್ಳಿ ಸಮೀಪವಿರುವ ಮಲೆನಾಡಿನ ಅನುಭವ ನೀಡುವ, ಪ್ರಕೃತಿ ರಮಣೀಯತೆಗೆ ಹೆಸರಾಗಿರುವ ಬೆನಕನಹಳ್ಳ  ಶ್ರೀ ಬೆನಕಪ್ಪ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಅಮಾವಾಸ್ಯೆಯ ದಿನ ವಾಮಾಚಾರ ಮಾಡಿ

ನಿಧಿ ಕಳ್ಳರು ಪುರಾತನ ಛತ್ರ ವಿರೂಪಗೊಳಿಸಿ ಹಳ್ಳ ತೋಡಿ ಹುಡುಕಾಟ ನಡೆಸಿರುವ ಘಟನೆ ನಡೆದಿದೆ.

ನಿರ್ಜನ ಪ್ರದೇಶದಲ್ಲಿರುವ ಬೆನಕಪ್ಪ ದೇವಾಲಯದ ಛತ್ರದಲ್ಲಿ ನಿಧಿ ಶೋಧಕ್ಕಾಗಿ ದಿಗ್ಭಂಧನ, ಪೂಜೆ, ಮಾಟ, ಮಂತ್ರ ಮಾಡಲಾಗಿದೆ.

ಗುಂಡಿ ತೋಡಿ ಕುಡಿಕೆ, ಅರಿಶಿಣ, ಕುಂಕುಮ ಹಾಗೂ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಉಪಯೋಗಿಸಿ ಶೋಧಕಾರ್ಯ ನಡೆಸಿದ್ದಾರೆ. ಈ ಘಟನೆಯಿಂದ ದೇವಾಲಯದ ಬಳಿ ಗ್ರಾಮಸ್ಥರು ತೆರಳು ಭಯ ಭೀತರಾಗಿದ್ದಾರೆ.

ಸರ್ಕಾರ ನಿರ್ಜನ ಪ್ರದೇಶದಲ್ಲಿರುವ ದೇವಸ್ಥಾನಗಳಿಗೆ ಸೂಕ್ತ ಭದ್ರತೆ ಹೊದಗಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!