ಇಂದು ಬೆಳ್ಳಂಬೆಳಗ್ಗೆ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ನಂದಿ ಮೋರಿ ಸಮೀಪದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು(25) ಎಂದು ಗುರುತಿಸಲಾಗಿದೆ.
ದೊಡ್ಡಬಳ್ಳಾಪುರ ಹೊರವಲಯದ ಮಾರಸಂದ್ರದ ಬಳಿ ಇರುವ ಫೈವ್ ಸ್ಟಾರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇತ್ತಿಚೆಗೆ ಮೃತನ ತಾಯಿ ಕೂಡ ನೇಣಿಗೆ ಶರಣಾಗಿದ್ದರು. ಇದೀಗ ಮಗ ಕೂಡ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ವಾಯ್ಸ್ ಮೆಸೇಜ್
ಹೇ.. ಬ್ರೋ ನಾನು ಲೇಔಟ್ ನಲ್ಲಿ ಸೂಸೈಡ್ ಮಾಡ್ಕೋತಿನಿ. ಬೆಳಗ್ಗೆ ಬಂದು ಬಾಡಿನ ಕಲೆಕ್ಟ್ ಮಾಡಿಕೊಳ್ಳಿ ಎಂದು ತನ್ನ ಕೆಲ ಸ್ನೇಹಿತರಿಗೆ ವಾಟ್ಸಾಪ್ ಮೂಲಕ ತಡರಾತ್ರಿ ವಾಯ್ಸ್ ಮೆಸೆಜ್ ಕಳುಹಿಸಿದ್ದಾನೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…