ಕೊಡಗಿನ ಕುಶಾಲನಗರದ ವರ್ತಕರೊಬ್ಬರು ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭದಲ್ಲಿ ತಲೆ ಟ್ವಿಸ್ಟ್ ಆಗಿ ಅಸು ನೀಗಿರುವ ಘಟನೆ ನಿನ್ನೆ ಮಂಗಳೂರಿನಲ್ಲಿ ನಡೆದಿದೆ.
ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ನ ಮಾಲೀಕ ನಿಶಾಂತ್ ಎಂಬುವವರೇ ಈಜುಕೊಳದಲ್ಲಿ ದಾರುಣವಾಗಿ ಅಂತ್ಯ ಕಂಡವರಾಗಿದ್ದಾರೆ.
ಅವರು ಮಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಈಜುಕೊಳಕ್ಕೆ ಹಾರುವುದು, ಅಲ್ಲೇ ನೀರಿನಲ್ಲಿ ತೇಲುವುದು, ನೀರಿನಿಂದ ಅಲ್ಲಿದ್ದವರು ದಡಕ್ಕೆ ಸೇರಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.