ಆನೇಕಲ್ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರ ಮಹೋತ್ಸವಕ್ಕೆ ಆಗಮಿಸುತ್ತಿದ್ದ ರಾಯಸಂದ್ರ ಗ್ರಾಮದ ತೇರು ಗಾಳಿಯಿಂದ ಉರುಳಿ ಬಿದ್ದಿದೆ.
ಹುಸ್ಕೂರಿನ ಮದ್ದೂರಮ್ಮ ಜಾತ್ರೆಗೆ ಹತ್ತಾರು ಹಳ್ಳಿಗಳಿಂದ ತೇರುಗಳು ಬರುತ್ತಿದ್ದವು. ರಾಯಸಂದ್ರ ಗ್ರಾಮದಿಂದ ಬಂದಿದ್ದ ತೇರು ಧರೆಗುರುಳಿದೆ. ಮದ್ದೂರಮ್ಮ ದೇವಾಲಯದ ಸಮೀಪವೇ ಬಾರಿ ಗಾಳಿ ಉಂಟಾಗಿದ್ದರಿಂದ ನಿಯಂತ್ರಣಕ್ಕೆ ಸಿಲುಕದೇ ತೇರು ಧರೆಗುಳಿರುಳಿದೆ.
ಮರಗಳ ಸಹಾಯದಿಂದ 100 ಅಡಿಗೂ ಹೆಚ್ಚು ಎತ್ತರದ ತೇರು ನಿರ್ಮಾಣವಾಗಿತ್ತು. ರಾಸುಗಳು ಮತ್ತು ಭಕ್ತರು ದೇವಾಲಯದ ಬಳಿ ಎಳೆದು ತರುತ್ತಿದ್ದರು. ಈ ವೇಳೆ ಅವಘಢ ಸಂಭವಿಸಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.