ಇತ್ತೀಚೆಗೆ ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ದಾಳಿ ಮಾಡಿದ್ದರು. ಕನ್ನಡಿಗರ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ರಾಜ್ಯ ಸರಕಾರ ಮುಂದಾಗಲಿ ಎಂಬ ಕಾರಣಕ್ಕೆ ಹಲವು ಸಂಘಟನೆಗಳು ಇಂದು (ಮಾ.22) ಕರ್ನಾಟಕ ಬಂದ್ ಆಚರಣೆ ಮಾಡಲಾಗಿತ್ತಿದೆ.
ಇಂದು ಕರ್ನಾಟಕ ಬಂದ್ ಆಚರಣೆ ಹಿನ್ನೆಲೆ ದೊಡ್ಡಬಳ್ಳಾಪುರ ನಗರಕ್ಕೂ ಬಂದ್ ಬಿಸಿ ಅಲ್ಪ ಮಟ್ಟಿಗೆ ತಟ್ಟಿದೆ. ಸದಾ ಗಿಜುಗುಡುತ್ತಿದ್ದ ನಗರದ ಹೃದಯ ಭಾಗ ಹಳೇ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.
ನಗರದ ಹಳೇ ಬಸ್ ನಿಲ್ದಾಣ, ತಾಲೂಕು ಕಚೇರಿ ವೃತ್ತ, ಟಿಬಿ ವೃತ್ತ, ಡಿ.ಕ್ರಾಸ್, ಡೈರಿ ಸರ್ಕಲ್, ರಂಗಪ್ಪ ಸರ್ಕಲ್, ರೈಲ್ವೆ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಯುಗಾದಿ ಹಬ್ಬ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಹಳಷ್ಟು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಕಾರಣ ಬಂದ್ ಕೈ ಬಿಡಲು ನಿರ್ಧಾರ ಮಾಡಿ, ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲು ತೀರ್ಮಾನ ಮಾಡಲಾಗಿದೆ.