ದೊಡ್ಡಬಳ್ಳಾಪುರ: ಇ-ಖಾತಾ ನೀಡಲು 8 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ದೊಡ್ಡತುಮಕೂರು ಗ್ರಾಮ ಪಂಚಾಯ್ತಿ ಪಿಡಿಒ ಮಂಜುಳಾ ಲೋಕಾಯುಕ್ತ ಜಾಲಕ್ಕೆ ಬಿದ್ದಿದ್ದಾರೆ.
ದೊಡ್ಡತುಮಕೂರು ಗ್ರಾಮದ ಬೈಲಪ್ಪ ಅವರ ಪುತ್ರ ಭೈರೇಶ್ ಎಂಬುವರು ನಿವೇಶನದ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದರು. ಇ-ಖಾತಾ ನೀಡಲು 8ಸಾವಿರ ರೂಪಾಯಿ ಹಣಕ್ಕೆ ಪಿಡಿಒ ಮಂಜುಳಾ ಒತ್ತಾಯಿಸಿದ್ದಾರೆ ಎಂಬ ಮಾಹಿತಿ.
ಈ ಬಗ್ಗೆ ಭೈರೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಲಂಚದ ಹಣ ನೀಡುವಾಗ ಪಿಡಿಒ ಮಂಜುಳಾ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ತಡೆವಕಾಯ್ದೆಯಡಿ ಕೇಸ್ ದಾಖಲಿಸಿ, ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು. ಲೋಕಾಯುಕ್ತ ಪೊಲೀಸರಿಂದ ಮುಂದುವರೆದ ತನಿಖೆ