
ಕೋಲಾರ: ಕೃಷಿ ಪಂಪ್ ಸೆಟ್ಗಳಿಗೆ ಗುಣಮಟ್ಟದ 10 ತಾಸು ವಿದ್ಯುತ್ ನೀಡಿ ಕಾಡಾನೆಗಳ ಹಾವಳಿ ಇರುವ ಕಾಮಸಮುದ್ರ ಬೂದಿಕೋಟೆ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ವಿದ್ಯುತ್ ಖಡಿತ ಮಾಡದಂತೆ ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿ ಮಾ,25 ರ ಮಂಗಳವಾರ ಕಾಮಸಮುದ್ರ ಬೆಸ್ಕಾಂ ಇಲಾಖೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ನಗರದ ಅರಣ್ಯ ಉದ್ಯಾನವನದಲ್ಲಿ ತಟ್ಟೆ ಹಿಡಿದು ಗುಣಮಟ್ಟದ 10 ತಾಸು ವಿದ್ಯುತ್ ಭಿಕ್ಷೆ ನೀಡಿ ಕಾಡಾನೆಗಳಿಂದ ರೈತರ ಬೆಳೆ ಪ್ರಾಣವನ್ನು ರಕ್ಷಣೆ ಮಾಡಬೇಕೆಂದು ಬಂಗಾರಪೇಟೆ ತಾಲ್ಲೂಕಾದ್ಯಕ್ಷ ಕದರಿನತ್ತ ಅಪ್ಪೋಜಿರಾವ್ ಇಂಧನ ಸಚಿವರನ್ನು ಒತ್ತಾಯಿಸಿದರು.
ಗಡಿಭಾಗದ ಕಾಮಸಮುದ್ರ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವಂತಹ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಕುಟುಂಬ ಸಂಸಾರವನ್ನು ಬಿಟ್ಟು ಕಾಡಾನೆಗಳ ಹಾವಳಿಯಲ್ಲೂ ಕೃಷಿ ಪಂಪ್ಸೆಟ್ಗಳ ಬಳಿ ರಾತ್ರಿವೇಳೆ ಕಾವಲು ಕಾಯಬೇಕಾದ ಪರಿಸ್ಥಿತಿ ಇದೆ. ಅಲ್ಲಿನ ರೈತರ ಕಷ್ಟವನ್ನು ಅರಿತು ವಿದ್ಯುತ್ ನೀಡುವಲ್ಲಿ ಬೆಸ್ಕಾಂ ಅಧಿಕಾರಿಗಳು ವಿಫಲವಾಗಿದ್ದಾರೆ ಕೇಳಿದರೆ ಹಿರಿಯ ಅಧಿಕಾರಿಗಳ ಮೇಲೆ ನೆಪ ಹೇಳಿ ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿರುವುದು ಬೇಜವಾಬ್ದಾರಿ ವಿಚಾರವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಬೆಸ್ಕಾಂ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.
ರಾತ್ರಿ ವೇಳೆ ತೋಟಗಳಿಗೆ ನೀರು ಆಯಿಸಲು ಹೋಗುವ ರೈತರಿಗೆ ರೈತರನ್ನು ಕಾಡಾನೆಗಳು ತುಳಿದು ಪ್ರಾಣ ಬಲಿ ತೆಗೆದುಕೊಳ್ಳುತ್ತಿದ್ದರೂ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮರ್ಪಕವಾದ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಲ್ಲಿ ಜನ ಪ್ರತಿನಿಧಿಗಳು ವಿಫಲವಾಗಿದ್ದಾರೆಂದು ಆರೋಪ ಮಾಡಿದರು.
ಲಕ್ಷಾಂತರ ರೂಪಾಯಿ ಖಾಸಗಿ ಬಂಡವಾಳ ಹಾಕಿ ಬೆಳೆದಿರುವ ಬೆಳೆಗಳು ಕೈಗೆ ಬರುವ ಸಮಯದಲ್ಲಿ ಸಮರ್ಪಕವಾದ ವಿದ್ಯುತ್ ನೀಡದೆ ಬೆಳೆ ನಷ್ಟ ಒಂದು ಕಡೆಯಾದರೆ ಮತ್ತೊಂದು ಕಡೆ ರೋಗಗಳು ನಿಯಂತ್ರಣಕ್ಕೆ ಬಾರದೆ ಬೆಲೆ ಕುಸಿತದಿಂದ ಕಂಗಾಲಾಗಿರುವ ಟೆಮೊಟೋ ಹೂ, ಮತ್ತಿತರ ವಾಣಿಜ್ಯ ಬೆಳೆಗಳಿಗೆ ಬೆಸ್ಕಾಂ ಅಧಿಕಾರಿಗಳೇ ರೈತ ವಿರೋಧಿಗಳಾಗಿದ್ದಾರೆ. ಕಾರ್ಖಾನೆಗಳಿಗೆ ಶ್ರೀಮಂತರ ಖಾಸಗಿ ಕಾರ್ಯಕ್ರಮಗಳಿಗೆ ವಿದ್ಯುತ್ ನೀಡಲು ಯಾವುದೇ ಲೋಡ್ಷೆಡ್ಡಿಂಗ್ ಇರುವುದಿಲ್ಲ. ರೈತರಿಗೆ ವಿದ್ಯಾರ್ಥಿಗಳಿಗೆ ವಿದ್ಯುತ್ ನೀಡಬೇಕಾದರೆ ಬೆಸ್ಕಂ ಅಧಿಕಾರಿಗಳಿಗೆ ಪ್ರತಿ ವರ್ಷ ರೈತರು ಬೆಳೆದ ಅನ್ನ ತಿಂದು ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ಸಾಧ್ಯವಾಗದೆ ಇದ್ದರೆ, ಇನ್ನು ಬೆಸ್ಕಂ ಇಲಾಖೆ ಇದ್ದು ಪ್ರಯೋಜನವೇನು ಎಂದು ಪ್ರಶ್ನೆ ಮಾಡಿದರು.
ಹೋಬಳಿ ಅದ್ಯಕ್ಷ ಕಾಮಸಮುದ್ರ ಮುನಿಕೃಷ್ಣ ಮಾತನಾಡಿ 1 ಎಕರೆ ಬೆಳೆ ಬೆಳೆಯಬೇಕಾದರೆ ಕನಿಷ್ಠ ಹದಗೆಟ್ಟಿರುವ ಕೃಷಿ ಕ್ಷೇತ್ರದ ಬೆಲೆ ಏರಿಕೆಯಲ್ಲಿ 2 ರಿಂದ 3 ಲಕ್ಷ ಬಂಡವಾಳ ಸುರಿಯಬೇಕಾಗುತ್ತಿದೆ. ಆದರೂ ಬೆಳೆ ಸಮೃದ್ದವಾಗಿ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಭರವಸೆಯಲ್ಲಿರುವ ರೈತರಿಗೆ ಬೆಸ್ಕಂ ಅದಿಕಾರಿಗಳ ಬೇಜವಾಬ್ದಾರಿಯಿಂದ ಗುಣಮಟ್ಟದ ವಿದ್ಯುತ್ ಇಲ್ಲದೆ ಕಣ್ಣು ಮುಂದೆಯೇ ಬೆಳೆ ಬಿಸಲಿಗೆ ಒಣಗಿ ಕೈಗೆ ಬರುವ ಅದಾಯ ಮಣ್ಣುಪಾಲಾಗುತ್ತಿದೆ. ಆದರೂ ಅಧಿಕಾರಿಗಳು ಕೈಗಾರಿಕೋದ್ಯಮಗಳಿಗೆ ನೀಡುವ ಬೆಲೆ ರೈತರಿಗೆ ನೀಡುತ್ತಿಲ್ಲ. ಟಿ.ಸಿ. ಬದಲಾವಣೆಯಿಂದ ಹಿಡಿದು ಕಂಬಗಳ ಬಂದಲಾವಣೆ ಹಾಗೂ ಸರ್ಕಾರದಿಂದ ರೈತರಿಗೆ ನಿರಂತರ ಜ್ಯೋತಿ ಹಾಗೂ ಇಲಾಖೆಯ ಅಭಿವೃದ್ದಿಗೆ ಬರುವ ಅನುದಾನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒಳ ಒಪ್ಪಂದದಿಂದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟಿ ಕೊಟಿ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಅವ್ಯವಸ್ತೆಯನ್ನು ಸರಿಪಡಿಸಲು ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ಗಡಿಭಾಗದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿ ಕಾಡಾನೆಗಳ ಹಾವಳಿಯಿಂದ ರೈತರನ್ನು ರಕ್ಷಣೆ ಮಾಡಿ, ಸಂಜೆ 6 ರಿಂದ ಬೆಳಿಗ್ಗೆ 6 ರ ವರೆಗೆ ನಿರಂತರ ಜ್ಯೋತಿ ಬೆಳಿಗ್ಗೆ 6 ರಿಂದ 10 ರವರೆಗೆ ಸಂಜೆ 3 ರಿಂದ 6 ರ ವರೆಗೆ ಗುಣಮಟ್ಟದ ವಿದ್ಯುತ್ ನೀಡುವಂತೆ ಮಾ,25ರ ಮಂಗಳವಾರ ಕಾಮಸಮುದ್ರ ಬೆಸ್ಕಾಂ ಇಲಾಖೆ ಆನೆಗಳ ಸಮೇತ ಮುತ್ತಿಗೆ ಹಾಕಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುನಿರಾಜು, ವಿಶ್ವ, ಗೋವಿಂದಪ್ಪ, ಗುಲಟ್ಟಿ, ಯಲ್ಲಣ್ಣ, ಸುರೇಶ್, ಮುನಿರಾಜು, ರಾಮಕೃಷ್ಣಪ್ಪ, ನಾಗರಾಜ, ಮಂಜುನಾಥ್, ಕೃಷ್ಣಪ್ಪ, ಐಯಪ್ಪ, ಗೋಪಾಲಪ್ಪ, ಶೈಲಜ, ರಾಧಮ್ಮ, ಶಾಂತಮ್ಮ, ಚೌಡಮ್ಮ, ಮುಂತಾದವರು ಇದ್ದರು.