ತೂಬಗೆರೆಯಲ್ಲಿ ಪುನೀತ್ ರಾಜಕುಮಾರ್ 50ನೇ ಜನ್ಮದಿನ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ ನಟ ದಿವಂಗತ ಪುನೀತ್ ರಾಜಕುಮಾರ್ ರವರ 50ನೇ ಹುಟ್ಟುಹಬ್ಬವನ್ನು, ಇಲ್ಲಿನ ರಾ.ಶಿ.ರಾ.ಪು ಅಭಿಮಾನಿ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪುನೀತ್ ಅಭಿಮಾನಿಗಳು ತೂಬಗೆರೆ ಬಸ್ ನಿಲ್ದಾಣದಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ, ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಅಗಲಿದ ನಟನ ಹುಟ್ಟುಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಿದರು. ನೆಚ್ಚಿನ ನಟನ ಹೆಸರಿನಲ್ಲಿ ಅನ್ನದಾನ ಮಾಡಿದರು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಮುಖಂಡ ರಾದ ಗಂಗಾಧರ್ ಮಾತನಾಡಿ, ಪುನೀತ್ ರಾಜಕುಮಾರ್ ನಮ್ಮಿಂದ ಕಣ್ಮರೆಯಾಗಿದ್ದರೂ, ಅವರ ಸರಳ, ಸಜ್ಜನಿಕೆ, ಪ್ರೀತಿ, ಆತ್ಮವಿಶ್ವಾಸದಿಂದ ಕೂಡಿದ ವ್ಯಕ್ತಿತ್ವ ಪ್ರೇರಕ ಶಕ್ತಿಯಾಗಿದೆ. ನಮ್ಮಂತಹ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದರು.

ರಾ.ಶಿ.ರಾ.ಪು ಅಭಿಮಾನಿ ಬಳಗದ ಪದಾಧಿಕಾರಿಗಳಾದ ರಾಮಾಂಜನಿ, ಸಾಲಿ ಮುನಿರಾಜ, ಕೇಬಲ್ ಮಂಜು, ರವಿಕಿರಣ್, ಸಿಎಂ ಕೃಷ್ಣಪ್ಪ , ಶ್ರೀನಿವಾಸ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಮುನಿಕೃಷ್ಣಪ್ಪ ಗ್ರಾಮಸ್ಥರು ಮುಖಂಡರುಗಳು ಅಭಿಮಾನಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!